Advertisement

Mangaluru “ಆತ್ಮಶಕ್ತಿ’ಯ ಸಾಧನೆ ಅದ್ವಿತೀಯ: ಜನಾರ್ದನ ಪೂಜಾರಿ

11:19 PM Dec 24, 2023 | Team Udayavani |

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್‌ ಟ್ರಸ್ಟ್‌ ಮಂಗಳೂರು ಹಾಗೂ ಆತ್ಮಶಕ್ತಿ ಪತ್ರಿಕೆಯ ದ್ವಿದಶಮಾನೋತ್ಸವ ಸಂಭ್ರಮ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಕೊರಗಪ್ಪ ಸಭಾಭವನದಲ್ಲಿ ರವಿವಾರ ನಡೆಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮಾತನಾಡಿ, ಎರಡು ದಶಕಗಳ ಹಿಂದೆ ನಾನೇ ಉದ್ಘಾಟಿಸಿದ ಈ ಟ್ರಸ್ಟ್‌ ಇದೀಗ ದ್ವಿದಶಮ ಆಚರಣೆಯಲ್ಲಿದ್ದು, ಅದ್ವಿತೀಯ ಸಾಧನೆಗೈದಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುಯೋಗ ಮತ್ತೆ ನನಗೆ ಸಿಕ್ಕಿದ್ದು, ದೇವರ ಕೃಪೆ ಎಂದು ಹೇಳಿದರು.

ಆತ್ಮಶಕ್ತಿ ವಿಶೇಷಾಂಕ ಬಿಡುಗಡೆಗೊಳಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಶೋಷಿತ ಸಮಾಜವಾಗಿದ್ದ ಸಮಯದಲ್ಲಿ ಇಡೀ ಸಮಾಜಕ್ಕೆ ಬೆಳಕು ಕೊಡುವ ಕೆಲಸ ಬ್ರಹ್ಮಶ್ರೀ ನಾರಾಯಣ ಗುರುಗಳು ನಡೆಸಿಕೊಟ್ಟರು. ಅವರ ಹೆಸರಿನಲ್ಲಿ ಕೆಲಸ ಕಾರ್ಯ ಕೈಗೆತ್ತಿಕೊಂಡರೆ ಯಶಸ್ಸು ಕಾಣುತ್ತದೆ ಎನ್ನುವುದು ಆತ್ಮಶಕ್ತಿ ಟ್ರಸ್ಟ್‌, ಪತ್ರಿಕೆಯೇ ಸಾಕ್ಷಿ ಎಂದರು.

ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌ ಶುಭಹಾರೈಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಅವರು ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಧನ ಸಹಾಯ ವಿತರಿಸಿದರು. ಟ್ರಸ್ಟ್‌ನ ಗೋಪಾಲ್‌ ಎಂ. ಇದ್ದರು.

ಪ್ರಕಾಶನ ಮತ್ತು ಟ್ರಸ್ಟ್‌ ಅಧ್ಯಕ್ಷ ವಾಮನ್‌ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಅಧ್ಯಕ್ಷ ವಾಮನ್‌ ಕುದ್ರೋಳಿ ಅವರ ಜೀವನದರ್ಶನ “ತ್ರಿವಿಕ್ರಮ’ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಚಿತ್ತರಂಜನ್‌ ಬೋಳಾರ್‌ ದಂಪತಿಯನ್ನು ಸಮ್ಮಾನಿಸಲಾಯಿತು.
ಆತ್ಮಶಕ್ತಿ ಪತ್ರಿಕಾ ವ್ಯವಸ್ಥಾಪಕ ನಿರ್ದೇಶಕ ಸಹಕಾರತ್ನ ಚಿತ್ತರಂಜನ್‌ ಬೋಳಾರ್‌ ಅವರು ಸ್ವಾಗತಿಸಿದರು.

Advertisement

ಸಾಧಕರಿಗೆ ಪ್ರಶಸ್ತಿ ಪ್ರದಾನ
ಜಾನಪದ ವಿದ್ವಾಂಸ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್‌ ಮತ್ತು ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್‌ ಕೆ. ಅವರಿಗೆ “ಆತ್ಮಶಕ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಂ.ಎಸ್‌. ರಾವ್‌, ಶೈಲೇಂದ್ರ ವೈ. ಸುವರ್ಣ, ಊರ್ಮಿಳಾ ರಮೇಶ್‌, ತಮ್ಮ ಲಕ್ಷ್ಮಣ, ಡಾ| ಸದಾನಂದ ಪೂಜಾರಿ, ಲೀಲಾಕ್ಷ ಕರ್ಕೇರ, ಡಾ| ರಮೇಶ್‌ ಸಾಲಿಯಾನ್‌, ಅರುಣ್‌ ಶೆಟ್ಟಿ ಅವರಿಗೆ ಸಾಧನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುದ್ರೋಳಿ ಯುವಕ ಸಂಘಕ್ಕೆ ಸಾಮಾಜಿಕ ಸಂಸ್ಥೆ ಪ್ರಶಸ್ತಿ ಮತ್ತು ಪ್ರತಿಭಾವಂತರಾದ ಡಾ| ನೇಹಲ್‌ ನೇಮಿರಾಜ್‌, ಡಾ| ಸಯೀಕ್ಷ ಕೋಟೆಕಾರ್‌, ಡಾ| ಉಜ್ವಲ್‌ ಯು. ಸುವರ್ಣ, ಡಾ| ಸಂಜಿತ್‌ ಎಸ್‌. ಅಂಚನ್‌, ಚಂದ್ರಪ್ರಭ ದಿವಾಕರ್‌ ಅವರನ್ನು ಪುರಸ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next