Advertisement

ಸಾಧನೆ ಬಿಂಬಿಸಿದ ವಸ್ತು ಪ್ರದರ್ಶನ

10:07 AM Sep 12, 2017 | |

ಕಲಬುರಗಿ: ನಗರದ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ವಸ್ತು ಪ್ರದರ್ಶನ
ಮೊದಲ ದಿನ ಸಪ್ಪೆಯಾಗಿತ್ತು. ಅಲ್ಲದೆ, ಜನರನ್ನು ಸೆಳೆಯುವಲ್ಲಿ ವಿಫಲವಾಯಿತಾದರೂ, ಕೆಲವು ವಿಭಾಗಗಳ ವಿದ್ಯಾರ್ಥಿಗಳು ಮಾಡಿದ ಮಾದರಿಗಳು ಮಹತ್ವದ್ದೆನ್ನಿಸಿದವು.

Advertisement

ವಿವಿ ಆವರಣದಲ್ಲಿರುವ 37 ವಿಭಾಗಗಳಲ್ಲೂ ಆಯಾ ವಿಭಾಗದ ಸಾಧನೆಗಳು ಹಾಗೂ ಸಂಶೋಧನೆ ಬಿಂಬಿಸುವ
ಪ್ರಯತ್ನ ಮಾಡಲಾಯಿತು. ಸಸ್ಯಶಾಸ್ತ್ರ ವಿಭಾಗ, ವಿಜ್ಞಾನ ವಿಭಾಗ, ಎಲೆಟ್ರಾನಿಕ್ಸ್‌, ಕನ್ನಡ ಅಧ್ಯಯನ ಸಂಸ್ಥೆ, ವಸ್ತು ವಿಜ್ಞಾನ ವಿಭಾಗ, ದೃಶ್ಯಕಲಾ ವಿಭಾಗದಲ್ಲಿನ ಮಾದರಿಗಳು ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆದವು.

ಹೆದ್ದಾರಿಗಳಲ್ಲಿ ಕಣಗಿಲ ಮತ್ತು ಪೇಪರ್‌ ಹೂವುಗಳ ಗಿಡಗಳನ್ನು ನೆಡುವುದರಿಂದ ಧೂಳಿನ ಸಮಸ್ಯೆಗೆ ಪರಿಹಾರ ಕಾಣಬಹುದು ಎನ್ನುವ ಮಾದರಿ ಸಸ್ಯಶಾಸ್ತ್ರ ವಿಭಾಗದಲ್ಲಿ ಗಮನ ಸೆಳೆಯಿತು. ಅದಲ್ಲದೆ, ಕೈಗಾರಿಕೆಗಳಿಂದ ಹೊರ ಬರುವ ಹೊಗೆಯನ್ನು ಎಕಾjಸ್ಟ್‌ ರೂಮ್‌ಗೆ ಕೊಂಡೊಯ್ದು ಅಲ್ಲಿ ಶೇಖರಣೆ ಆಗುವ ಕಾರ್ಬನ್‌ ಡೈಆಕ್ಸೈಡ್‌ನ್ನು ಬಳಕೆ ಮಾಡಿ ಸೀಸ್‌ ಪೆನ್ಸಿಲ್‌ ನಿಬ್‌ ಹಾಗೂ ಇತರೆ ವಸ್ತು ತಯಾರಿಸುವ ಮಾದರಿಯನ್ನು ವಿಭಾಗದ ಡೀನ್‌ ಡಾ| ಜಿ.ಎಂ. ವಿದ್ಯಾಸಾಗರ ಹಾಗೂ ಪ್ರತಿಭಾ ಮಠದ ಅವರ ಮಾರ್ಗದರ್ಶನದಲ್ಲಿ ಸಿದ್ದ ಮಾಡಿದ್ದಾಗಿ ವಿದ್ಯಾರ್ಥಿಗಳಾದ ಭೀಮಾಶಂಕರ ಚ .ಹುಣಸಗಿ, ಬಿಲಾಲ ಅಹೆಮದ್‌, ಸಚಿನ್‌ ಗಡ್ಡದ ಮತ್ತು ಗುರುಬಸವ ಮಾಹಿತಿ ನೀಡಿದರು. ಕಲಾ ವಿಭಾಗದಲ್ಲಿನ ಕಲಾಕೃತಿಗಳು, ಮಣ್ಣಿನಿಂದ ಮಾಡಿದ ಕೃತಿಗಳು, ನವಿಲು, ವಿವಿಧ ಸಾಧಕರ ಮೂರ್ತ ರೂಪಗಳು ಗಮನ ಸೆಳೆದವು. ಕನ್ನಡ ವಿಭಾಗದಲ್ಲಿ ಹಲವಾರು ಪ್ರಕಟಣೆಗಳನ್ನು ಇಡಲಾಗಿತ್ತು. ಅಂಬೇಡ್ಕರ್‌ ಭವನದಲ್ಲಿ ಸಿದ್ದಪಡಿಸಿ ಇಡಲಾಗಿದ್ದ, ಬಾಬಾ ಸಾಹೇಬರ ವಿವಿಧ ಸಾಧನೆಗಳ ಫೋಟೋಗಳು, ಚಳವಳಿ ಫೋಟೋಗಳು ಗಮನ ಸೆಳೆದವು.

ಜನರ ಕೊರತೆ: ಆದರೆ, ವಿವಿ ವ್ಯವಸ್ಥೆ ಮಾಡಿರುವ ವಸ್ತುಪ್ರದರ್ಶನ ನೋಡಲು ಜನರ ಬರಲೇ ಎನ್ನವ ಮಾತು ಕೇಳಿ ಬಂದಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು. ಆದರೆ, ಸಾರ್ವಜನಿಕರು ಬರಲಿಲ್ಲ. ಅವರನ್ನು ಹೇಗೆ ಸೆಳೆಯುವುದು ಎನ್ನುವುದು ಸಂಘಟಕರಿಗೆ ಪ್ರಮುಖ ಪ್ರಶ್ನೆಯಾಗಿತ್ತು.  

ಸೂರ್ಯಕಾಂತ ಎಂ.ಜಮಾದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next