Advertisement

ಮೀನು ಸಾಕಿ ಲಕ್ಷಾಧೀಶರಾದ ದಂಪತಿ

04:35 PM Dec 26, 2018 | |

ಬಾಗಲಕೋಟೆ: ನೌಕರಿಯನ್ನು ಬೆನ್ನು ಹತ್ತಿರುವ ಯುವಕರಿಗೆ ಮಾದರಿ ಎನ್ನುವಂತೆ ಬೆಳಗಾವಿ ಯುವ ದಂಪತಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಹೌದು ಪದವಿ ಉನ್ನತ ಶಿಕ್ಷಣ ಪಡೆದ ಅನೇಕ ವಿದ್ಯಾವಂತರು ಇಂದು ನೌಕರಿಗೆ ಹಿಂದಿ ಬಿದ್ದಿರುವಾಗ ಶೋಯಿಬ್‌ಖಾನ ಮಡಿವಾಳೆ ಎಂಬ ದಂಪತಿಗಳು ಮೀನು ಸಾಕಣೆ ಕೈಗೊಂಡು ಮೀನು ಕೃಷಿಯಲ್ಲಿ ಸಾಧನೆ ಮಾಡಿ ಯುವಕರಿಗೆ ನೌಕರಿಗಿಂತ ಸ್ವಂತ ಉದ್ಯೋಗ ಕೈಗೊಂಡರೆ ಹೆಚ್ಚು ಆದಾಯ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಮುಗಿದು ಮೇಳೆ ಕೆಲ ತಿಂಗಳು ಕಾಲ ನೌಕರಿಗೆ ಅಲೆದಾಡಿದ ಇವರು ಮೀನು ಕೃಷಿ ಆರಂಭಿಸಿ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.

Advertisement

ಮೀನ ತಳಿ ಜಾತಿ: ಕೋಲ್ಕತ್ತಾ, ಮಹಾರಾಷ್ಟ್ರ, ಕೇರಳ, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಂದ ಜಬ್ರಾ, ಜಾಗ್ವಾರ, ಪ್ಮಾಮರ್‌ ಆನ್‌, ಸಿಲ್ವರ್‌ ಡಾಲರ್‌, ಸ್ಟಾಲಿನ್‌ ಸಿಕಿರಿನ್‌, ಗೋಲ್ಡ್‌ಫಿಶ್‌, ಕಾಮಾನ್‌ ಕಾರ್ಪ್‌ ಮತ್ತು ಪ್ರಮುಖವಾಗಿ ಜಪಾನಿನ್‌ ಕೋಯಿ ಕಾರ್ಪ್‌ ಸೇರಿದಂತೆ ಒಟ್ಟು 50 ವಿವಿಧ ಜಾತಿಯ ಮೀನುಗಳನ್ನು ಇವರು ಮಾರಾಟ ಮಾಡುತ್ತಾ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ಲಾಭ: ಶೋಯಿಬ್‌ ಖಾನ್‌ ಅವರು 5 ವರ್ಷದ ಹಿಂದೆ ಕೇವಲ 2 ಲಕ್ಷ ರೂ. ಹಾಕಿ ಮೀನು ಸಾಗಾಣಿಕೆ ಆರಂಭಿಸಿ ಇಂದು ಪ್ರತಿ ವರ್ಷಕ್ಕೊಮ್ಮೆ ರೂ. 4ರಿಂದ 5ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಯಾರು ಕೈಯಲ್ಲಿ ಕೆಲಸಕ್ಕೆ ಹೋಗದೇ ಸ್ವಂತ ಉದ್ಯೋಗ ಮಾಡಿ ಪ್ರತಿ ವರ್ಷ ರೂ. 5 ಲಕ್ಷ ಆದಾಯ ಗಳಿಸುತ್ತಾರೆ.

ಮಕ್ಕಳ ಆಕರ್ಷಣೆ ಕೇಂದ್ರ ಬಿಂದು: ತೋಟಗಾರಿಕೆಯ 7ನೇ ಮೇಳದಲ್ಲಿ ಮೀನು ಸಾಗಣಿಕೆಯ ನಗರ ಪ್ರದೇಶ ಮತ್ತು ಶಾಲಾ ವಿದ್ಯಾರ್ಥಿಗಳ ಆಕರ್ಷಣಿಯ ಕೇಂದ್ರ ಬಿಂದುವಾಗಿತ್ತು. ಮೀನು ಸಾಗಾಣಿಕೆ ನೋಡುಗರನ್ನಷ್ಟೆ ಅಲ್ಲದೆ ಮುದ್ದು ಶಾಲಾ ಮಕ್ಕಳನ್ನು ತನ್ನತ್ತ ಸೆಳೆಯಿತು. ನಗರ ಪ್ರದೇಶ ಜನರು ಮೀನು ನೋಡುವದರಲ್ಲಿ ಮತ್ತು ಕೊಂಡುಕೊಳ್ಳುವಲ್ಲಿ ಉತ್ಸಾಹ ಕಂಡುಬರುತ್ತಿತ್ತು. ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರನ್ನು ತನ್ನತ್ತ ಮೀನು ಕೃಷಿ ಗಮನ ಸೆಳೆಯಿತು.

ನಾನು ಮೀನು ಕೃಷಿ ಆರಂಭಿಸಲು ರೂ. 2 ಲಕ್ಷ ಬಂಡವಾಳ ತೊಡಗಿಸಿ ಈಗ ಪ್ರತಿ ವರ್ಷ ರೂ. 4 ರಿಂದ 5 ಲಕ್ಷದವರಿಗೆ ಆದಾಯ ಗಳಿಸುತ್ತಿದ್ದೇನೆ.
 ಶೋಯಿಬ್‌ಖಾನ ಮಡಿವಾಳೆ,
 ಮೀನು ಕೃಷಿಕ

Advertisement

ವಿಠ್ಠಲ ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next