Advertisement

ಕ್ರೀಡಾ ಲೋಕದಲ್ಲಿ ಸಾಧನೆ ಮಾಡಿ

12:30 PM Dec 29, 2019 | Suhan S |

ನರಗುಂದ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿದಾಯಕ ಹೆಜ್ಜೆಗಳನ್ನಿಟ್ಟ ಈ ಕಾಲೇಜು ಕ್ರೀಡಾ ರಂಗದಲ್ಲೂ ದಾಪುಗಾಲಿಟ್ಟಿದೆ. ಸುಸಜ್ಜಿತಒಳಾಂಗಣ ಕ್ರೀಡಾಂಗಣ ಸದುಪಯೋಗ ಪಡೆದು ಕ್ರೀಡಾ ಲೋಕದಲ್ಲಿ ಸಾಧನೆಗಳ ಮೈಲಿಗಲ್ಲು ಸ್ಥಾಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜಿನ ಹಿಂಭಾಗದ ತಾಲೂಕು ಕ್ರೀಡಾಂಗಣ ಬದಿಗೆ ಲೋಕೋಪಯೋಗಿ ಇಲಾಖೆಯಿಂದ 4059 ಯೋಜನೆಯಡಿ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಒಳಾಂಗಣ ಕ್ರೀಡಾಂಗಣ ಉಪಯುಕ್ತವಾಗಿದೆ.ಫ್ಲೋರಿಂಗ್‌ (ನೆಲಹಾಸು) ಹಾಳಾಗದಂತೆ ನೋಡಿಕೊಂಡು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಟೇಬಲ್‌ ಟೆನಿಸ್‌ ಹಾಗೂ ಕೇರಂ ಆಡುವ ಮೂಲಕ ಕ್ರೀಡಾಂಗಣಕ್ಕೆ ಸಚಿವರು ಚಾಲನೆ ನೀಡಿ ಗಮನ ಸೆಳೆದರು. ಜಿಪಂ ಸದಸ್ಯರಾದ ರಾಜುಗೌಡ ಪಾಟೀಲ, ರೇಣುಕಾ ಅವರಾದಿ, ತಾಪಂ ಅಧ್ಯಕ್ಷ ವಿಠಲ ತಿಮ್ಮರಡ್ಡಿ, ಎಸ್‌.ಆರ್‌. ಹಿರೇಮಠ, ಪ್ರಾಚಾರ್ಯ ಡಾ| ಎಂ.ಡಿ. ಕಮತಗಿ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ಬಸು ಪಾಟೀಲ, ಸಿಪಿಐ= ಡಿ.ಬಿ. ಪಾಟೀಲ, ಸಹಾಯಕ ಯುವಜನ ಸೇವಾ ಹಾಗೂ ಕ್ರೀಡಾಧಿ ಕಾರಿ ಎನ್‌.ಆರ್‌.ನಿಡಗುಂದಿ, ಐ.ವೈ. ಕುಂಬಾರ, ಗುತ್ತಿಗೆದಾರ ನಾಗರಾಜ ಹಾಗೂ ಕಾಲೇಜು ಪ್ರಾಧ್ಯಾಪಕರು, ಸಿಡಿಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next