Advertisement

Acer MUVI 125 4ಜಿ ಇ-ಸ್ಕೂಟರ್‌- ಎಕ್ಸ್‌-ಶೋರೂಮ್‌ ಬೆಲೆ 99,999ರೂ.

08:24 PM Oct 16, 2023 | Team Udayavani |

ತೈವಾನ್‌ ಮೂಲದ ಏಸರ್‌ ಕಂಪನಿಯು ಭಾರತದ ಮಾರುಕಟ್ಟೆಗೆ ತಮ್ಮ ಮೊಟ್ಟಮೊದಲ ಇ-ಸ್ಕೂಟರ್‌ ಅನ್ನು ಪರಿಚಯಿಸಿದೆ. ಏಸರ್‌ ಎಂಯುವಿಐ 125 4ಜಿ ಇ-ಸ್ಕೂಟರ್‌ನ ಎಕ್ಸ್‌-ಶೋರೂಂ ಬೆಲೆ 99,999 ಆಗಿದೆ. ಮುಂಬೈ ಮೂಲದ ಎಲೆಕ್ಟ್ರಿಕ್‌ ವಾಹನ ಸ್ಟಾರ್ಟ್‌ಅಪ್‌ ಥಿಂಕ್‌ ಎಬಿಕೆಗೋ ಈ ಸ್ಕೂಟರ್‌ ಅನ್ನು ಅಭಿವೃದ್ಧಿಪಡಿಸಿದೆ.

Advertisement

ಎಲ್‌ಇಡಿ ಹೆಡ್‌ಲೈಟ್‌, ಎಲ್‌ಇಡಿ ಇಂಡಿಕೇಟರ್‌ಗಳು, ಡಿಸ್ಕ್ ಬ್ರೇಕ್‌ ಸೇರಿದಂತೆ ಅತ್ಯಾಧುನಿಕ ವಿನ್ಯಾಸ ಹೊಂದಿದೆ. ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್‌ ಆಗಲಿದ್ದು, ಮುಂಗಡ ಬುಕ್ಕಿಂಗ್‌ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ ಒಮ್ಮೆಗೆ ಚಾರ್ಜ್‌ ಮಾಡಿದರೆ ಎಷ್ಟು ಕಿ.ಮೀ. ಸಾಗಲಿದೆ ಎಂಬ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next