ಬೆಂಗಳೂರು: ಕಳೆದ ತಿಂಗಳು ಕಳ್ಳತನ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಕೇರಳ ಮೂಲದ ಜಿಮೋನ್ ವರ್ಗೀಸ್ ಆತ್ಮಹತ್ಯೆ ಪ್ರಕರಣ ಮತ್ತೂಂದು ತಿರುವು ಪಡೆದುಕೊಂಡಿದ್ದು, ಕಳ್ಳತನ ಪ್ರಕರಣದಲ್ಲಿ ಆತನೇ ಆರೋಪಿ ಎಂಬುದು ಪುಲಕೇಶಿನಗರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವರ್ಷದ ಹಿಂದೆ ಕೇರಳದಿಂದ ಬೆಂಗ ಳೂರಿಗೆ ಬಂದಿದ್ದ ವರ್ಗೀಸ್, ಗ್ರೀನ್ ಅವಿನ್ಯೂ ಅಪಾರ್ಟ್ ಮೆಂಟ್‌ನ ಗಿರಿಜಾ ಎಂಬವರ ಬಳಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಅದೇ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿದ್ದ ಕೋಣೆಯಲ್ಲಿ ವಾಸವಾಗಿದ್ದ.
ಈ ಮಧ್ಯೆ ಕೆಲ ದಿನಗಳ ಹಿಂದೆ ಮನೆಯಲ್ಲಿ ಎರಡೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಅದನ್ನು ವರ್ಗೀಸ್, ಮತ್ತೂಬ್ಬ ಕೆಲಸದಾಕೆ ಕಳವು ಮಾಡಿದ್ದಾರೆ ಎಂದು ಗಿರಿಜಾ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗ ಪೊಲೀಸರು ವರ್ಗೀಸ್‌ನನ್ನು ಕರೆಯಿಸಿ ವಿಚಾರಣೆ ನಡೆಸಿ, ಕಳುಹಿಸಿದ್ದರು.
ಮಲೆಯಾಳಂನಲ್ಲಿದ್ದ ಡೆತ್‌ನೋಟ್ ಪತ್ತೆ ಆಗಿತ್ತು: ಈ ಘಟನೆಯಿಂದ ನೊಂದಿದ್ದ ವರ್ಗೀಸ್, ಆ.21 ರಂದು ಟೆರೇಸ್‌ನಲ್ಲಿರುವ ತನ್ನ ಕೋಣೆಯ ಶೌಚಾಲಯದ ಕಿಟಕಿಗೆ ಹಗ್ಗದಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆತನ ಬಳಿ ಮಲಯಾಳಂ ಭಾಷೆಯಲ್ಲಿ ಮನೆ ಮಾಲೀಕರಾದ ಗಿರಿಜಾ ವಿರುದ್ಧ ಬರೆದ ಡೆತ್‌ನೋಟ್ ಪತ್ತೆ ಯಾಗಿತ್ತು. ಈ ಸಂಬಂಧ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿತ್ತು.
ಕೇರಳದಲ್ಲಿ ಕೋಟ್ಯಂತರ ರೂ. ಚಿನ್ನಾಭರಣ ಜಪ್ತಿ: ಮತ್ತೂಂದೆಡೆ ವರ್ಗೀಸ್ ವಿರುದ್ಧ ತನಿಖೆ ಮುಂದು ವರಿಸಿದ ಪೊಲೀಸರಿಗೆ ಚಿನ್ನಾಭರಣವಿದ್ದ ಬಾಕ್ಸ್‌ನಲ್ಲಿ ವರ್ಗೀಸ್ ಬೆರಳಚ್ಚು ಪತ್ತೆ ಯಾಗಿತ್ತು. ಈ ಮಾಹಿತಿ ಮೇರೆಗೆ ಕೇರಳ ದಲ್ಲಿರುವ ಆತನ ಪತ್ನಿ ವಿಚಾರಣೆ ನಡೆಸಿ ದಾಗ ಚಿನ್ನಾಭರಣವನ್ನು ಪತಿಯೇ ಕೊಟ್ಟು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಳು. ಹೀಗಾಗಿ ಆಕೆಯಿಂದ ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡ ಲಾಗಿತ್ತು. ಇತರೆ ಚಿನ್ನಾಭರಣವನ್ನು ಕೇರಳದ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿ ದ್ದಾನೆ ಎಂಬುದು ಗೊತ್ತಾಗಿದೆ. ಅದನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯುತ್ತಿದೆ.
ವರ್ಗೀಸ್ ಕಳವು ಮಾಡಿರುವುದು 38 ಚಿನ್ನಾಭರಣ, ಆದರೆ, ಗಿರಿಜಾ 12 ಚಿನ್ನಾಭರಣ ಎಂದು ದೂರು ನೀಡಿದ್ದರು. ಅಲ್ಲದೆ, ಆತನ ಮನೆಯಲ್ಲಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಇನ್ನು ಕೆಲ ಚಿನ್ನಾಭರಣ ವಶಕ್ಕೆ ಪಡೆಯಬೇಕಿದೆ ಎಂದು ಪೊಲೀಸರು ಹೇಳಿದರು.
ಪತಿ ಆತ್ಮಹತ್ಯೆ ಮಾಡಿಕೊಂಡಿದ್ರೂ ದೂರು ನೀಡದ ಪತ್ನಿ:
ಈ ಮಧ್ಯೆ ವರ್ಗೀಸ್ ಪತ್ನಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ದೂರು ನೀಡಲು ಹಿಂಜರಿದಿದ್ದರು. ಆದರೂ, ಡೆತ್‌ನೋಟ್ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಈ ಎಲ್ಲಾ ಅನುಮಾನಗಳ ಮೇಲೆ ವರ್ಗೀಸ್ ಆರೋಪಿ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.