Advertisement
ಎ. 29ರಂದು ರೆಂಜಿಲಾಡಿ ಗ್ರಾಮದ ಕುಶಾಲಪ್ಪ ಗೌಡ ಅವರ ಪುತ್ರಿಯ ವಿವಾಹ ಔತಣಕೂಟ ನಡೆದಿತ್ತು. ಅಲ್ಲಿ ನಿಶಾಂತ್ ಎಂಬ ಯುವಕ ಯುವತಿಯೊಂದಿಗಿರುವ ಫೋಟೋವನ್ನು ಬಾಂತಾಜೆ ನಿವಾಸಿ ದಿವಾಕರ ತೆಗೆದಿದ್ದಾರೆ ಎಂದು ಆರೋಪಿಸಿ ನಿಶಾಂತ್ ನೇತೃತ್ವದಲ್ಲಿ ಧನಂಜಯ, ಜನಾರ್ದನ, ಲೋಕೇಶ, ರಮೇಶ್, ಉದಯ, ಭುವನ, ಅಶ್ವಿತ್ ಅವರು ರಾತ್ರಿ 11.30ರ ಸುಮಾರಿಗೆ ದಿವಾಕರ ಅವರ ಮನೆಗೆ ಬಂದು ಹಲ್ಲೆ ನಡೆಸಿದರು. ಆಗ ದಿವಾಕರ ಅವರ ಅತ್ತಿಗೆ ಭವ್ಯಶ್ರೀ ಜಗಳ ಬಿಡಿಸಲು ಯತ್ನಿಸಿದಾಗ ಸ್ವಾತಿ, ರೇಷ್ಮಾ ಹಾಗೂ ಶೈನಿ ಎಂಬವರು ಭವ್ಯಶ್ರೀಗೆ ಹಲ್ಲೆ ನಡೆಸಿದರು. ನೆರೆಮನೆಯ ಶಿವಪ್ಪ ರಕ್ಷಣೆಗೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಲಾಗಿದೆ.
ಔತಣಕೂಟದ ಮನೆಯಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಬಾತ್‌ರೂಮ್‌ನ ಕಿಟಕಿಯಿಂದ ಯುವಕನೋರ್ವ ವೀಡಿಯೋ ಮಾಡಿದ್ದಾನೆ. ಘಟನೆಯ ಮರುದಿನ ವೀಡಿಯೋ ಮಾಡಿದ್ದ ಯುವಕನ ಮನೆಗೆ ತೆರಳಿ ವೀಡಿಯೋ ಡಿಲೀಟ್ ಮಾಡಬೇಕು ಎಂದು ಆಗ್ರಹಿಸಿದಾಗ ಆರೋಪಿ ಯುವಕ ಹಾಗೂ ಅವರ ಸಂಗಡಿಗರು ಹಲ್ಲೆ ಮಾಡಿದ್ದಾರೆ ಎಂದು ಕಡಬ ಠಾಣೆಗೆ ದೂರು ನೀಡಲಾಗಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.