Advertisement
ಸಂದೀಪ್ ತನ್ನನ್ನು ಮತ್ತು ಮೂವರು ಆರೋಪಿಗಳನ್ನು ನಿರಪರಾಧಿ ಎಂದು ಬಣ್ಣಿಸಿ ಸಂತ್ರಸ್ತೆಯ ತಾಯಿ ಮತ್ತು ಆಕೆಯ ಸಹೋದರ ವಿರುದ್ಧ ಗಂಭೀರ ಆರೋಪಗಳನ್ನು ಈ ಪತ್ರದ ಮುಖೇನ ಮಾಡಿದ್ದಾನೆ.
Related Articles
Advertisement
ಅವಳು ಮತ್ತು ನಾನು ಘಟನೆಯ ದಿನದಂದು ಜಮೀನಿನಲ್ಲಿ ಭೇಟಿಯಾದೆವು. ಅವರೊಂದಿಗೆ ತಾಯಿ ಮತ್ತು ಸಹೋದರ ಇದ್ದರು. ಅವಳ ಮನೆಯವರು ನನ್ನನ್ನು ಮನೆಗೆ ಹೋಗುವಂತೆ ಹೇಳಿದರು. ನಾನು ನನ್ನ ಮನೆಗೆ ಹೋದೆ. ಆದರೆ ನಾನ್ನೊಂದಿಗೆ ಮಾತನಾಡಿದ ಕಾರಣಕ್ಕೆ, ನನ್ನ ಸ್ನೇಹ ಸಂಪಾದಿಸಿದ ಕಾರಣ ಹುಡುಗಿಗೆ ತಾಯಿ ಮತ್ತು ಸಹೋದರ ತೀವ್ರವಾಗಿ ಥಳಿಸಿದ್ದಾರೆ. ಅದು ಅವಳಲ್ಲಿ ಗಂಭೀರ ಗಾಯಗಳಿಗೆ ಕಾರಣವಾಯಿತು. ಬಳಿಕ ಆಸ್ಪತ್ರೆ ಸಾಗಿಸಿದ ಮೇಲೆ ಚಿಕಿತ್ಸೆ ಫಲಕಾರಿಯಾಗದೇ ಅವಳು ಸಾವನ್ನಪ್ಪಿದಳು. ಅವಳ ಮರಣದ ವಾರ್ತೆಯನ್ನು ನಾನು ಗ್ರಾಮಸ್ಥರಿಂದ ತಿಳಿದುಕೊಂಡೆ. ಆ ತನಕ ನನಗೆ ಈ ವಿಷಯ ಗೊತ್ತೇ ಇಲ್ಲ. ನಾನು ಯಾರ ಸಾವಿಗೂ ಕಾರಣವಾಗಿಲ್ಲ. ಆ ಹುಡುಗಿಯೊಂದಿಗೆ ನಾನು ಕೆಟ್ಟದಾಗಿ ವರ್ತಿಸಲಿಲ್ಲ. ಈ ಪ್ರಕರಣದಲ್ಲಿ ಹುಡುಗಿಯ ತಾಯಿ ಮತ್ತು ಸಹೋದರ ನನ್ನನ್ನು ಮತ್ತು ಇತರ ಮೂವರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದಾರೆ.
ನಾವೆಲ್ಲರೂ ನಿರಪರಾಧಿಗಳು. ದಯವಿಟ್ಟು ಈ ವಿಷಯವನ್ನು ಸರಿಯಾಗಿ ತನಿಖೆ ಮಾಡುವ ಮೂಲಕ ನಮಗೆ ನ್ಯಾಯ ಒದಗಿಸಿ ಎಂದು ಪತ್ರದಲ್ಲಿ ಅತ್ಯಾಚಾರದ ಆರೋಪ ಹೊತ್ತ ವ್ಯಕ್ತಿ ಬರೆದುಕೊಂಡಿದ್ದಾನೆ. ಈ ನಡುವೆ ಜೈಲಿನಲ್ಲಿರುವ ನಮ್ಮ ಮನೆಯ ಸದಸ್ಯರ ಜೀವಕ್ಕೆ ಬೆದರಿಕೆ ಇದೆ ಎಂದು ಆರೋಪಿಗಳ ಕುಟುಂಬ ಆರೋಪಿಸಿದೆ. ಜೈಲಿನಲ್ಲಿ ಸುರಕ್ಷಿತವಾಗಿಲ್ಲ ಎಂದು ಕುಟುಂಬ ಹೇಳಿದೆ.
ಬಹಿರಂಗಗೊಂಡ ಫೋನ್ ಕರೆಗಳುಮುಖ್ಯ ಆರೋಪಿ ಸಂದೀಪ್ ಮತ್ತು ಬಾಲಕಿಯ ಸಹೋದರನ ನಡುವಿನ ಫೋನ್ ಕರೆಗಳ ವಿವರ ಬುಧವಾರ ಬಹಿರಂಗವಾಗಿತ್ತು. ಇವರಿಬ್ಬರು 13 ಅಕ್ಟೋಬರ್ 2019 ರಿಂದ ಮಾರ್ಚ್ 2020 ರ ವರೆಗೆ 104 ಬಾರಿ ಮಾತುಕತೆ ನಡೆಸಿದ್ದಾರೆ. ಸಂಪೂರ್ಣ ಕರೆ ಅವಧಿಯು ಸುಮಾರು 5 ಗಂಟೆಗಳು ಎಂದು ಹೇಳಲಾಗುತ್ತಿದೆ. ಸಂದೀಪ್ ಅವರಿಂದ 62 ಕರೆಗಳು ಮತ್ತು ಸಂತ್ರಸ್ತೆಯ ಸಹೋದರನ ಸಂಖ್ಯೆಯಿಂದ 42 ಕರೆಗಳನ್ನು ಮಾಡಲಾಗಿದೆ. ಈ ಕರೆಯಲ್ಲಿ ಸಂತ್ರಸ್ತೆ ಮತ್ತು ಸಂದೀಪ್ ನಡುವಿನ ಸಂಭಾಷಣೆಯ ವಿವರ ಲಭ್ಯವಾಗಿದೆ. ಸಿಡಿಆರ್‌ನಲ್ಲಿ ದಾಖಲಾಗಿರುವಂತೆ ಇಬ್ಬರ ನಡುವೆ ಸುಮಾರು 60 ಕರೆಗಳು ರಾತ್ರಿ ಸಮಯದಲ್ಲೇ ಏರ್ಪಟ್ಟಿವೆ ಎಂದು ತಿಳಿದುಬಂದಿದೆ.