Advertisement

ಅರಣ್ಯಾಧಿಕಾರಿಯಿಂದ ಮಾರಣಾಂತಿಕ ಹಲ್ಲೆ ಆರೋಪ 

04:18 PM Oct 04, 2017 | Team Udayavani |

ಬೆಳ್ತಂಗಡಿ: ಪುದುವೆಟ್ಟಿನ ಕಮಲ್‌ದಾಸ್‌ ಅವರಿಗೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪ ಹೊತ್ತ ಉಜಿರೆ
ಉಪ ವಲಯ ಅರಣ್ಯಾಧಿಕಾರಿ ಕೀರ್ತನ್‌ ಶೆಟ್ಟಿ ವಿರುದ್ಧ ವಿವಿಧ ಸಂಘಟನೆಗಳು ಮಂಗಳವಾರ ಇಲ್ಲಿನ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಅರಣ್ಯಾಧಿಕಾರಿಯನ್ನು ತತ್‌ಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಯಿತು. ಶನಿವಾರದ ಒಳಗೆ ಕ್ರಮ ಕೈಗೊಳ್ಳುವ ಭರವಸೆ ಶಾಸಕರಿಂದ ಲಭಿಸಿತು. ಮುಖ್ಯಮಂತ್ರಿಗಳಿಗೆ, ಅರಣ್ಯ ಸಚಿವರಿಗೆ ಮನವಿ ನೀಡಲಾಯಿತು.

ಸುಳ್ಳು ಕೇಸು ಬೇಡ
ಹಲ್ಲೆಗೆ ಒಳಗಾದ ಕಮಲ್‌ದಾಸ್‌ ಈಗ ಮಂಗಳೂರಿನ ಹೈಲಾಂಡ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯ ಖರ್ಚು ವೆಚ್ಚವನ್ನು ಅರಣ್ಯ ಇಲಾಖೆ ಭರಿಸಬೇಕೆಂದು ಒತ್ತಾಯಿಸಲಾಯಿತು. ಸಂಶಯದ ಆಧಾರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ, ಸುಳ್ಳು ಕೇಸು ಜಡಿಯುವ ಇಲಾಖೆಯ ಪ್ರವೃತ್ತಿ ಕೈಬಿಡಬೇಕೆಂದು ಆಗ್ರಹಿಸಲಾಯಿತು. 

ಶಾಸಕ ಕೆ. ವಸಂತ ಬಂಗೇರ, ಫಾ| ವಿನಯ್‌ ಜೋಸೆಫ್‌, ತಾ| ಬಿಜೆಪಿ ಅಧ್ಯಕ್ಷ ರಂಜನ್‌ ಜಿ.ಗೌಡ, ಜೆಡಿಎಸ್‌ ತಾ| ಅಧ್ಯಕ್ಷ ಪ್ರವೀಣ್‌ ಚಂದ್ರ ಜೈನ್‌, ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಶೀನಿವಾಸ ಕಿಣಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿನಂದನ್‌ ಹರೀಶ್‌ ಕುಮಾರ್‌, ಜಿ.ಪಂ. ಸದಸ್ಯ ಸಾಹುಲ್‌ ಹಮೀದ್‌, ತಾ. ಪಂ.ಸದಸ್ಯರಾದ ವಿಜಯ ಗೌಡ, ಶಶಿಧರ ಕಲ್ಮಂಜ, ಸುಧೀರ್‌ ಸುವರ್ಣ, ವಿ.ಟಿ. ಸೆಬಾಸ್ಟಿಯನ್‌, ಪ್ರವೀಣ್‌ ಗೌಡ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿರ್ದೇಶಕ ಚಂದು ಎಲ್‌., ಧರ್ಮಸ್ಥಳ ಪಂಚಾಯತ್‌ ಅಧ್ಯಕ್ಷ ಚಂದನ್‌ ಕಾಮತ್‌, ಸದಸ್ಯ ಪ್ರಭಾಕರ ಪೂಜಾರಿ, ಕೇಶವ ಬೆಳಾಲು, ಮಲಯಾಳಿ ಕ್ರಿಶ್ಚಿಯನ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಎ.ಸಿ. ಜಯರಾಜ್‌, ಉದ್ಯಮಿ ಎ.ಸಿ. ಕುರಿಯನ್‌. ಎ.ಸಿ. ಮ್ಯಾಥ್ಯೂ, ತಾ| ಅಧ್ಯಕ್ಷ ಅಜಯ್‌, ರಾಜ್ಯ ಪದಾಧಿಕಾರಿ ಸೇವಿಯರ್‌ ಪಾಲೇಲಿ, ನೆರಿಯ ಪಂ.ಅಧ್ಯಕ್ಷ ಮಹ್ಮದ್‌, ಮಾಜಿ ತಾ.ಪಂ. ಸದಸ್ಯರಾದ ಜಯಂತ್‌ ಕೋಟ್ಯಾನ್‌, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಎಪಿಎಂಸಿ ಸದಸ್ಯ ಮಹಮ್ಮದ್‌ ಗಫೂರ್‌, ಮಾಜಿ ಅಧ್ಯಕ್ಷ ಭರತ್‌ ಇಂದಬೆಟ್ಟು, ವಸಂತ ಪುದುವೆಟ್ಟು, ಪುದುವೆಟ್ಟು ಗ್ರಾ.ಪಂ. ಸದಸ್ಯ ರಾಯ್‌ ಜೋಸೆಫ್‌, ಮುಂಡಾಜೆ ಪಂಚಾಯತ್‌ ಸದಸ್ಯ ಅಬ್ದುಲ್‌ ಅಜೀಜ್‌, ಶಿಬಿ ಧರ್ಮಸ್ಥಳ, ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಬಿ.ಕೆ. ವಸಂತ್‌, ಡಿಎಸ್‌ಎಸ್‌ನ ವೆಂಕಣ್ಣ ಕೊಯ್ಯೂರು, ಶುಕುರು, ನ.ಪಂ. ಉಪಾಧ್ಯಕ್ಷ ಡಿ. ಜಗದೀಶ್‌, ಕಮಲ್‌ದಾಸ್‌ ಅವರ ತಾಯಿ ಮೇರಿಯಮ್ಮ, ಪತ್ನಿ ಡಯಾನಾ, ಮಕ್ಕಳಾದ ದೀಪ್ಸನ್‌, ದೀಪ್ಸಲ್‌, ಸಹೋದರ ಡೆನ್ನಿಸ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next