Advertisement

Belagavi: ನೀಟ್ ಹಗರಣದ ಮತ್ತೊಂದು ಪ್ರಕರಣ ಬೆಳಕಿಗೆ: ಆರೋಪಿ ಬಂಧನ

03:06 PM Jul 15, 2024 | Team Udayavani |

ಬೆಳಗಾವಿ: ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ನೀಟ್ ಹಗರಣ ಈಗ ಬೆಳಗಾವಿಗೂ ಅಂಟಿಕೊಂಡಿದೆ.

Advertisement

ಬೆಳಗಾವಿ ಮಾರ್ಕೆಟ್ ಪೊಲೀಸರು ಯಶಸ್ವೀ ಕಾರ್ಯಾಚರಣೆ ನಡೆಸಿ ತೆಲಂಗಾಣ ಮೂಲದ ಆರೋಪಿ ಅರಗೊಂಡ ಅರವಿಂದ ಉರ್ಫ್ ಅರುಣಕುಮಾರ (43)ನನ್ನು ಮುಂಬೈನಲ್ಲಿ ಬಂಧಿಸಿ ನೀಟ್ ಹಗರಣದ ಮತ್ತೊಂದು ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.

ಆರೋಪಿಯಿಂದ ಒಟ್ಟು 1,30, 41,884 ರೂ. ಮೌಲ್ಯದ ನಗದು ಕಂಪ್ಯೂಟರ್, ಲ್ಯಾಪ್‌ಟಾಪ್, ನಗದು ಹಣ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ

ಬೆಳಗಾವಿ ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆಗೆ ಮನೆ ಮಾಡಿದ್ದ ಅರುಣ ಕುಮಾರ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರಿಗೆ ಕರೆ ಮಾಡಿ ನೀಟ್ ನಲ್ಲಿ ಪರೀಕ್ಷೆ ಪಾಸ್ ಮಾಡಿಸಿ ನಿಮಗೆ ಮೆಡಿಕಲ್‌ ಸೀಟ್ ಕೊಡಿಸುವದಾಗಿ ಹೇಳುತ್ತಿದ್ದ.

ಈ ರೀತಿ ಬೆಳಗಾವಿಯ 10ಕ್ಕೂ ಅಧಿಕ ಜನರಿಂದ 1.08 ಕೋಟಿ ‌ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಡಿ ಸಿ ಪಿ ರೋಹನ್ ಜಗದೀಶ್ ತಿಳಿಸಿದರು.

Advertisement

ಬಂಧಿತ ಆರೋಪಿ ಹೈದರಾಬಾದ್, ಮಧ್ಯಪ್ರದೇಶ, ಕರ್ನಾಟಕ, ಮುಂಬೈ ಮೊದಲಾದ ಕಡೆಗಳಲ್ಲಿ ಇದೇ ರೀತಿ ವಂಚನೆ ಮಾಡಿದ್ದಾನೆ.

2023 ರಲ್ಲಿ ಬೆಳಗಾವಿ ನಗರದಲ್ಲಿ ಕೆಲವು ಪಾಲಕರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿತ್ತು.

ಆರೋಪಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಬೆಳಗಾವಿ ಪೊಲೀಸರು ಆರು ತಿಂಗಳಿಂದ ಅರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: Red Alert: ಹೊಸನಗರ ತಾಲೂಕಿನಲ್ಲಿ ರೆಡ್ ಅಲರ್ಟ್… ಜುಲೈ 16ರಂದು ಶಾಲಾ- ಕಾಲೇಜುಗಳಿಗೆ ರಜೆ

 

Advertisement

Udayavani is now on Telegram. Click here to join our channel and stay updated with the latest news.

Next