Advertisement

ವೇತನ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣಾದ ನೌಕರನ ಅಂತ್ಯಕ್ರಿಯೆ ಕಾರ್ಯ ಗೌಪ್ಯ!

03:01 PM Feb 08, 2023 | Team Udayavani |

ಬೆಂಗಳೂರು: ಮಾಸಿಕ ವೇತನ ನೀಡ ದಕ್ಕೆ ಬೇಸರಗೊಂಡಿದ್ದ ಗುಜರಿ ಕೆಲಸ ಗಾರ ಎಂ.ಡಿ. ರೂಹುಲ್‌ ಹೌಲಾ ದಾರ್‌(30) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವನ್ನು ಸಂಬಂಧಿಕರಿಗೂ ತಿಳಿಸದೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆತನ ಅಂತ್ಯಕ್ರಿಯೆ ನೆರವೇರಿಸಿದ ಗುಜರಿ ವ್ಯಾಪಾರಿ ಮೊಹಮ್ಮದ್‌ ರಂಜಾನ್‌ (40) ಹಾಗೂ ಕೆಲಸಗಾರ ರಸಲ್‌ (24) ಎಂಬುವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪಶ್ಚಿಮ ಬಂಗಾಳದ ಎಂ.ಡಿ. ರುಹುಲ್‌, 4 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಸಿಗೇ ಹಳ್ಳಿಯಲ್ಲಿ ವಾಸವಿದ್ದರು. ಆರೋಪಿ ಮೊಹಮ್ಮದ್‌ ರಂಜಾನ್‌ ಗುಜರಿ ಮಳಿಗೆಯಲ್ಲಿ ಸೈಕಲ್‌ನಲ್ಲಿ ಸುತ್ತಾಡಿ ಪ್ಲಾಸ್ಟಿಕ್‌ ಸಂಗ್ರಹಿಸಿ ತರುತ್ತಿದ್ದ. ಎರಡು ತಿಂಗಳಿನಿಂದ ಎಂ.ಡಿ. ರುಹೂಲ್‌ಗೆ ಸಂಬಳ ನೀಡಿರಲಿಲ್ಲ. ಜ.14ರಂದು ಮೊಹಮ್ಮದ್‌ ರಂಜಾನ್‌ ಬಳಿ ತೆರಳಿದ್ದ ರುಹೂಲ್‌, ಸಂಬಳ ನೀಡುವಂತೆ ಕೋರಿದ್ದರು. ಅದಕ್ಕೆ ಕೋಪಗೊಂಡ ರಂಜಾನ್‌, ನೀನು ಅಯೋಗ್ಯ. ನಿನಗೆ ಕೆಲಸ ಕೊಟ್ಟಿ ರುವುದೇ ಹೆಚ್ಚು. ಸಂಬಳ ಕೇಳುತ್ತಿಯಾ’ ಎಂದು ನಿಂದಿಸಿದ್ದಾನೆ. ಇದರಿಂದ ನೊಂದ ರುಹೂಲ್‌ ಮನೆಯಲ್ಲೇ ಲುಂಗಿಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ವಿಚಾರ ತಿಳಿದ ಆರೋಪಿಗಳಾದ ರಸಲ್‌ ಮತ್ತು ಮೊಹಮ್ಮದ್‌ ರಂಜಾನ್‌ ಆತ್ಮ ಹತ್ಯೆ ಪ್ರಕರಣದಲ್ಲಿ ತನ್ನನ್ನು ಪೊಲೀಸರು ಬಂಧಿಸಬಹುದೆಂದು ತಿಳಿದು, ಮೃತ ದೇಹವನ್ನು ಮುಸ್ಲಿಂ ವಿಧಿ- ವಿಧಾನ ದಂತೆ ಅಲಂಕರಿಸಿ ಖಾಜಿಸೊನ್ನೇನ ಹಳ್ಳಿಯ ಖಬಸ್ತಾನ್‌ಕ್ಕೆ ಕೊಂಡೊಯ್ದು ಅಲ್ಲಿಯ ಸಿಬ್ಬಂದಿಯ ದಿಕ್ಕು ತಪ್ಪಿಸಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಕಾಡುಗೋಡಿ ಪೊಲೀಸರು ರೂಹುಲ್‌ ಸಂಬಂಧಿಕರನ್ನು ಕರೆಸಿ ಪ್ರಕರಣ ದಾಖ ಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

ನಂತರ ಕೋರ್ಟ್‌ ಅನುಮತಿ ಪಡೆದು ಖಾಜಿಸೊನ್ನೇನಹಳ್ಳಿಯ ಖಬರ್‌ಸ್ತಾನದಲ್ಲಿದ್ದ ಹೂತಿಟಿದ್ದ ಮೃತ ದೇಹವನ್ನು ಹೊರಗೆ ತೆಗೆದು, ಪುನಃ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next