Advertisement

ಹತ್ತು ವರ್ಷಗಳ ಬಳಿಕ ನಗದು, ಚಿನ್ನಾಭರಣ ದೋಚಿದ್ದ ಮನೆಗಳ್ಳ ಬಂಧನ

11:49 AM Jan 17, 2021 | Team Udayavani |

ಕೊರಟಗೆರೆ: ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ದಾವಣಗೆರೆ ಮೂಲದ ವ್ಯಕ್ತಿಯನ್ನು ಕೊರಟಗೆರೆ ಠಾಣೆಯ ಪೋಲೀಸರು ಬಂಧಿಸಿ ಆತನಿಂದ 1.80 ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.

Advertisement

ಸೆರೆ ಸಿಕ್ಕ ಆರೋಪಿಯನ್ನು ದಾವಣಗೆರೆ ಜೆಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬ್ಬೀಕೆರೆ ಗ್ರಾಮದ ಧರ್ಮರಾಜ್‌ (46) ಎಂದು ಗುರುತಿಸಲಾಗಿದೆ. 10 ವರ್ಷದ ಹಿಂದೆ ತಾಲೂಕಿನ ನೇಗಲಾಲ ಗ್ರಾಮದ ನಾಗರಾಜು ಎಂಬುವವರ ಮನೆಯಲ್ಲಿ 2011 ಆ. 2ರಂದು ಕಳ್ಳತನ ನಡೆದಿದ್ದ ಬಗ್ಗೆ ಕೊರಟಗೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇವರ ಮನೆಯಲ್ಲಿ 89 ಸಾವಿರ ರೂ. 40ಗ್ರಾಂ ತೂಕದ ಅವಲಕ್ಕಿ ಸರ, 40 ಗ್ರಾಂ ಮಾಂಗಲ್ಯ ಸರ, 12 ಗ್ರಾಂ ತೂಕದ 3 ಜತೆ ಕಿವಿಯೋಲೆ ಸೇರಿ ಆಭರಣವನ್ನು ದೋಚಲಾಗಿತ್ತು. ಇವುಗಳನ್ನು ಒಟ್ಟು ಮೌಲ್ಯ 2.50 ಲಕ್ಷ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಅಮಿತ್ ಶಾ ಆಗಮನಕ್ಕೂ ಮುನ್ನ ಬೆಳಗಾವಿ ಬಿಜೆಪಿಯಲ್ಲಿ ಮೂಲ- ವಲಸಿಗ ವಿವಾದ

ಈ ಕುರಿತು ಕಾರ್ಯಾಚರಣೆಗೆ ಮುಂದಾದ ಪೊಲೀಸರು, ತಲೆಮರೆಸಿ ಕೊಂಡು ಬೇರೆ, ಬೇರೆ ಕಡೆ ನೆಲೆಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಧರ್ಮರಾಜ್‌ ವಿರುದ್ಧ ಬನವಾಸಿ, ಚಿಕ್ಕಮಗಳೂರು, ದಾವಣಗೆರೆ, ಕುಂದಾಪುರ, ಬಾಗಲಕೋಟೆ, ಅಜ್ಜಂಪುರ, ಶಿರಸಿ, ಚಿತ್ತೂರು, ಆಂಧ್ರ ಪ್ರದೇಶದ ಅನಂತಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಎಎಸ್ಪಿ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಪ್ರವೀಣ್‌. ಸಿಪಿಐ ಎಫ್ ಕೆ ನದಾಫ್ ನೇತೃತ್ವದಲ್ಲಿ ಕೋಳಾಲ ಠಾಣೆ ಪಿಎಸೈ ನವೀನ್‌ ಕುಮಾರ್‌, ಸಿಬ್ಬಂದಿಗಳಾದ ಮೋಹನ್‌ ಕುಮಾರ್‌, ಪುಟ್ಟಸ್ವಾಮಿ, ಮಂಜುನಾಥ್‌, ಗಂಗಾಧರ್‌ ಅವರನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next