Advertisement

ಮಂಗಳಮುಖಿ ಕೊಲೆ: 4 ಮಂದಿ ಆರೋಪಿಗಳ ಬಂಧನ  

01:07 PM Apr 30, 2022 | Team Udayavani |

ನೆಲಮಂಗಲ: ಮಹದೇವಪುರ ಬಳಿ ಮಂಗಳಮುಖಿ ಅನಿಕಾ ಕೊಲೆ ಆರೋಪಿಗಳನ್ನು ವಿಶೇಷ ತಂಡಗಳ ಕಾರ್ಯಾಚರಣೆಯ ಮೂಲಕ ಬಂಧನ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಕೆ. ವಂಶಿಕೃಷ್ಣ ತಿಳಿಸಿದರು.

Advertisement

ತಾಲೂಕಿನ ಅರಿಶಿನಕುಂಟೆಯ ಗ್ರಾಮಾಂತರ ಪೊಲೀಸ್‌ ಠಾಣೆ ಆವರಣದಲ್ಲಿ ನೆಲಮಂಗಲ ಉಪವಿಭಾಗದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹದೇವಪುರ ಗ್ರಾಮದ ಬಳಿ ವಾಸವಾಗಿದ್ದ ಮಂಗಳಮುಖಿ ಅನಿಕಾ ರಸ್ತೆ ಪಕ್ಕ ಪ್ರಜ್ಞೆತಪ್ಪಿ ನೆಲಕ್ಕೆ ಬಿದ್ದು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತವಾಗಿರುವಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಡಿವೈಎಸ್‌ಪಿ ಗೌತಮ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಎ. ರಾಜೀವ್‌, ಸಬ್‌ಇನ್ಸ್ ಪೆಕ್ಟರ್‌ ಈರಮ್ಮ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 4 ಜನ ಆರೋಪಿ ಸೆರೆ ಸಿಕ್ಕಿದ್ದಾರೆ.  ಓರ್ವ ಬಾಲಾಪರಾಧಿ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಮಂಗಳಮುಖಿ ಜತೆ ಆರೋಪಿತನಲ್ಲಿ ಒಬ್ಬ ಗಲಾಟೆ ಮಾಡಿಕೊಂಡಿದ್ದಾನೆ. ನಂತರ ಗುಂಪಿನಲ್ಲಿ ಬಂದು ಮಂಗಳಮುಖಿ ಅನಿಕಾಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಆರೋಪಿ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದರು.

ವ್ಹೀಲಿಂಗ್‌ ಶೋಕಿವಾಲರ ವಶ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೋಕಿಗಾಗಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದವರನ್ನು ಡಿವೈಎಸ್‌ಪಿ ಗೌತಮ್‌, ವೃತ್ತ ನಿರೀಕ್ಷಕ ರಾಜೀವ್‌, ತ್ಯಾಮಗೊಂಡ್ಲು ಪಿಎಸ್‌ಐ ಚಿಕ್ಕನರಸಿಂಹಯ್ಯರವರ ವಿಶೇಷ ತಂಡದ ಮೂಲಕ ರಾತ್ರಿವೇಳೆ ಯಲ್ಲಿ ಕಾರ್ಯಚಾರಣೆ ನಡೆಸಿದ್ದು, ವ್ಹೀಲಿಂಗ್‌ ಮಾಡುತ್ತಿದ್ದ 25 ಮೋಟರ್‌ ಸೈಕಲ್‌, ನಂಬರ್‌ ಪ್ಲೇಟ್‌ ಇಲ್ಲದ 5 ಮೋಟರ್‌ ಸೈಕಲ್‌, ಒಂದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದು 15 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಎಚ್ಚರ ತಪ್ಪಿದರೇ ಜೈಲು ಪಾಲು: ಸಂಚಾರಕ್ಕೆ ಬಳಸುವ ಬೈಕ್‌ ಕೆಲ ಯುವಕರು ಶೋಕಿಗಾಗಿ ವ್ಹೀಲಿಂಗ್‌ ನಂತಹ ಅಪರಾಧಕ್ಕೆ ಕಾರಣವಾಗುತ್ತಿದ್ದು, ಸಾರ್ವಜನಿಕರಿಂದ ಬಹಳಷ್ಟು ದೂರು ಬಂದಿವೆ. ವ್ಹೀಲಿಂಗ್‌ ಮಾಡುವವರನ್ನು ಮುಂದಿನ ದಿನಗಳಲ್ಲಿ ಸೂಕ್ಷವಾಗಿ ತನಿಖೆ ಮಾಡಿ ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗುತ್ತದೆ. ನಗರ ಪ್ರದೇಶದಲ್ಲಿ ಸಿಸಿಟೀವಿ ಅಳವಡಿಸಲಾಗಿದ್ದು, ಸುಲ ಭವಾಗಿ ವ್ಹೀಲಿಂಗ್‌ ಮಾಡುವವರನ್ನು ಬಂಧನ ಮಾಡಿ ಜೈಲು ಕಳಿಸಬಹುದು ಎಂದರು.

Advertisement

ಡಿವೈಎಸ್‌ಪಿ ಗೌತಮ್‌, ವೃತ್ತನಿರೀಕ್ಷ ಎ.ರಾಜೀವ್‌, ಶಿವಕುಮಾರ್‌, ಇನ್ಸ್‌ಪೆಕ್ಟರ್‌ ಎ.ವಿ. ಕುಮಾರ್‌, ಸಬ್‌ಇನ್ಸ್‌ಪೆಕ್ಟರ್‌ ಈರಮ್ಮ, ಚಿಕ್ಕನರಸಿಂಹಯ್ಯ, ಸುರೇಶ್‌, ಮುರುಳಿ, ಸಿಬ್ಬಂದಿ ಶಿವಶಂಕರ್‌, ಮಧುಕುಮಾರ್‌, ಸುನೀ

Advertisement

Udayavani is now on Telegram. Click here to join our channel and stay updated with the latest news.

Next