ಕಾಸರಗೋಡು: ಹತ್ತೂಂಬತ್ತರ ಹರೆಯದ ತರುಣಿಯನ್ನು ವಿವಿದೆಡೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಅಬ್ದುಲ್ ಸತ್ತಾರ್ ಯಾನೆ ಜಂಶಿ (31) ಮತ್ತು ಕಾಸರಗೋಡು ಮತ್ತು ಕಾಂಞಂಗಾಡ್‌ನಲ್ಲಿ ವಾಸಿಸುವ ಜಾಸ್ಮಿನ್(22)ಳನ್ನು ಪೊಲೀಸರು ಬಂಧಿಸಿದ್ದಾರೆ.
ಇವರ ಬಂಧನದೊಂದಿಗೆ ಈ ವರೆಗೆ ಒಟ್ಟು ಬಂಧಿತರ ಸಂಖ್ಯೆ ಐದಕ್ಕೇರಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ತರುಣಿಯನ್ನು ಪುಸಲಾಯಿಸಿ ವಿವಿದೆಡೆಗೆ ಕರೆದೊಯ್ದು ಹಲವರಿಗೆ ಒಪ್ಪಿಸಿದ್ದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.
ನಿಗೂಢ ನಾಪತ್ತೆ : ಎನ್‌ಐಎ ತನಿಖೆ
ಕಾಸರಗೋಡು: ಕಾಸರಗೋಡಿನಿಂದ ದುಬೈಗೆ ಹೋಗಿ ಅಲ್ಲಿಂದ ತಿಂಗಳುಗಳ ಹಿಂದೆ ನಿಗೂಢವಾಗಿ ನಾಪತ್ತೆಯಾದ ಬಳಿಕ ಯೆಮನ್‌ನಲ್ಲಿ ಕೇಂದ್ರ ಗುಪ್ತಚರ ವಿಭಾಗ ಪತ್ತೆಹಚ್ಚಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕೈಗೆತ್ತಿಕೊಂಡಿದೆ.
ಭಾರತೀಯರು ಯೆಮನ್‌ಗೆ ಹೋಗುವುದಕ್ಕೆ ಭಾರತ ಸರಕಾರ ನಿಷೇಧ ಹೇರಿದೆ. ಅದನ್ನು ಉಲ್ಲಂಘಿಸಿ ಎಂಟು ಮಂದಿ ಯೆಮನ್‌ಗೆ ಹೋಗಿರುವುದು ನಿಗೂಢತೆಗೆ ಕಾರಣವಾಗಿದೆ. ಈ ಎಂಟು ಮಂದಿ ತೃಕ್ಕರಿಪುರದಿಂದ ಮೊದಲು ದುಬೈಗೆ ಹೋಗಿ ಅಲ್ಲಿಂದ ಯೆಮನ್‌ಗೆ ಹೋಗಿದ್ದರು. ಇವರಲ್ಲೊಬ್ಬ 2016 ರಲ್ಲಿ ಭಾರತ ಬಿಟ್ಟು ವಿದೇಶದಲ್ಲಿರುವ ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಭಯೋತ್ಪಾದಕ ಶಿಬಿರಕ್ಕೆ ಹೋಗಿ ಸೇರಿದ ಪಡನ್ನದ ಸಾಜಿದ್‌ಗೆ ಸಂದೇಶ ಕಳುಹಿಸಿದ್ದನೆಂದು ಕಳವಳಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.