Advertisement

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

12:56 PM Dec 05, 2022 | Team Udayavani |

ಬೆಂಗಳೂರು: ಕಾಲೇಜು ದಿನಗಳಿಂದಲೂ ತಮ್ಮ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾನೆ ಎಂಬ ಆರೋ ಪದ ಮೇಲೆ ಸಹೋದ್ಯೋಗಿಯೊಬ್ಬನನ್ನು ಕೊಂದು ರಾಜ ಕಾಲುವೆಗೆ ಎಸೆದಿದ್ದ ಕಾನೂನು ಸಂಘ ರ್ಷಕ್ಕೊಳಗಾದವ ಸೇರಿ ಐವರು ಆರೋಪಿ ಗಳು ಘಟನೆ ಬೆಳಕಿಗೆ ಬಂದ ಎರಡೇ ಗಂಟೆಯಲ್ಲಿ ಹೆಣ್ಣೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬಾಬುಸಾಬ್‌ ಪಾಳ್ಯದ ದಿನೇಶ್‌ ಸಿಂಗ್‌ ದಾಮಿ(19), ಶೇರ್‌ಸಿಂಗ್‌ ದಾಮಿ(20), ದೀಪಕ್‌ (19), ನರೇಂದ್ರ(20) ಬಂಧಿತರು. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆರೋಪಿಗಳು ನ.30ರಂದು ನೇಪಾಳ ಮೂಲದ ಧನ್‌ಸಿಂಗ್‌ ದಾಮಿ(23) ಎಂಬಾತನನ್ನು ಕೊಲೆಗೈದು ಬಾಬುಸಾಬು ಪಾಳ್ಯದ ರಾಜಕಾಲುವೆಯಲ್ಲಿ ಎಸೆದಿದ್ದರು. ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ನೇಪಾಳ ಮೂಲದವರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಬಾಬುಸಾಬ್‌ ಪಾಳ್ಯದ ರಾಜಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ಯಾಗಿತ್ತು. ಮೃತದೇಹ ಹೊರತೆಗೆದು ಪರಿಶೀಲಿಸಿದಾಗ, ಆತನ ದೇಹಗಳ ಮೇಲೆ ಗಾಯದ ಗುರುತು, ಊದಿ ಕೊಂಡಿರುವುದು ಪತ್ತೆಯಾಗಿತ್ತು. ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು ಮೃತನ ಮಾಹಿತಿ ಸಂಗ್ರಹಿಸಲಾಗಿತ್ತು. ಆಗ ಕೊಲೆಯಾದ ಯುವಕ ನೇಪಾಳ ಮೂಲದವನಾಗಿದ್ದು, ಬಾಬುಸಾಬ್‌ ಪಾಳ್ಯದ ನಂಜಪ್ಪ ಗಾರ್ಡನ್‌ನಲ್ಲಿರುವ ಪಿಜಿಯಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಬಳಿಕ ಅಲ್ಲೇಯಿದ್ದ ಕೆಲ ಕೆಲಸಗಾರರನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.

ದಬ್ಬಾಳಿಕೆಗೆ ಬೇಸತ್ತು ಕೊಲೆ!: ಕೊಲೆಯಾದ ಧನ್‌ಸಿಂಗ್‌ ದಾಮಿ ಹಾಗೂ ಬಂಧಿತ ಆರೋಪಿಗಳು ನೇಪಾಳ ಮೂಲದವರು. ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಬಂದು ಎರಡು ತಿಂಗಳಿಂದ ನಗರದ ಬಾಬುಸಾಬ್‌ ಪಾಳ್ಯದ ಎಸ್‌.ಎಸ್‌. ಪಿಜಿಯಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಕೊಲೆಯಾದ ಧನ್‌ ಸಿಂಗ್‌ ಆರೋಪಿಗಳಿಗಿಂತ ವಯಸ್ಸಿ ನಲ್ಲಿ ದೊಡ್ಡವನಾಗಿದ್ದು, ಹೀಗಾಗಿ ಆರೋಪಿಗಳ ಮೇಲೆ ದಬ್ಟಾಳಿಕೆ ಮಾಡುತ್ತಿದ್ದ. ಮದ್ಯ ಕುಡಿಸಿ, ಸಿಗರೇಟ್‌ ಕೊಡಿಸಿ ಎಂದು ಬೇಡಿಕೆ ಇಡುತ್ತಿದ್ದ. ಕೆಲವೊಮ್ಮೆ ಮದ್ಯ ಸೇವಿಸಿ ಹಲ್ಲೆ ಕೂಡ ಮಾಡಿದ್ದಾನೆ. ಜತೆಗೆ ಈ ಮೊದಲೇ ನೇಪಾಳದಲ್ಲಿ ಕಾಲೇಜಿನಲ್ಲಿ ಓದುವಾಗಲೂ ದಬ್ಟಾಳಿಕೆ ಮಾಡುತ್ತಿದ್ದ. ಅದರಿಂದ ಬೇಸತ್ತು ಕೊಲೆಗೆ ಸಂಚು ರೂಪಿಸಲಾಯಿತು ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next