Advertisement

ಪುತ್ತೂರು:ಗಾಂಜಾ ಸೇವಿಸಿ ಅನುಚಿತ ವರ್ತನೆ; ಬಂಧನ

06:34 PM Oct 13, 2022 | Team Udayavani |

ಪುತ್ತೂರು: ಪೋಳ್ಯದ ಸಾರ್ವಜನಿಕ ತಂಗುದಾಣದ ಬಳ ಗಾಂಜಾ ನಶೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿ ಉಮ್ಮರ್‌ ಫಾರೂಕ್‌ ಬಂಧಿತ ಆರೋಪಿ.

ನಗರ ಠಾಣಾ ಎಸ್‌.ಐ. ಶ್ರೀಕಾಂತ್‌ ರಾಥೋಡ್‌ ಮತ್ತು ಸಿಬಂದಿಗಳು ರೌಂಡ್ಸ್‌ನಲ್ಲಿರುವಾಗ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕುರಿತಂತೆ ದೊರೆತ ಮಾಹಿತಿ ಪ್ರಕಾರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next