ಮೈಸೂರು: ತಿ.ನರಸೀಪುರ ತಾಲೂಕು ಎಂ.ಸಿ.ಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಎರಡು ಕುರಿಗಳು ಹಾಗೂ ಮೊಬೈಲ್ ಫೋನ್ ಸುಲಿಗೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕು ದೇವರಹಟ್ಟಿ ಗ್ರಾಮದ ಕರಿಯಣ್ಣ ಎಂಬುವರು ತಿ.ನರಸೀಪುರ ತಾಲೂಕು ಎಂ.ಸಿ.ಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬುವರ ಜಮೀನಿನಲ್ಲಿ 500 ಕುರಿ ಮರಿಗಳನ್ನು ಬಿಟ್ಟುಕೊಂಡು ಕಾಯುತ್ತಿದ್ದರು. ಜು.5 ರಂದು ರಾತ್ರಿ ನಾಲ್ವರು ಮಾರಕಾಸ್ತ್ರಗಳೊಂದಿಗೆ ಬಂದು ಕರಿಯಣ್ಣ ಹಾಗೂ ರಂಗನಾಥ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಮೊಬೈಲ್ ಮತ್ತು ಎರಡು ಕುರಿಗಳನ್ನುಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ತಿ.ನರಸೀಪುರಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಮೈಸೂರು ಜಿಲ್ಲಾ ಅಡಿಷನಲ್ ಪೊಲೀಸ್ ಸೂಪರಿಂಟೆಂಡೆಂಟ್ ನಂದಿನಿ, ನಂಜನಗೂಡು ಉಪ ವಿಭಾಗದ ಡಿಎಸ್‌ಪಿ ಗೋವಿಂದರಾಜು, ತಿ.ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣಪ್ಪ ಅವರನೇತೃತ್ವದ ತಂಡ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ದುಷ್ಕೃತ್ಯಕ್ಕೆ ಬಳಸಲಾಗಿದ್ದ ಎರಡು ಮೋಟಾರು ಬೈಕ್‌ಗಳನ್ನು ಜಪ್ತಿಮಾಡಿ, ಎರಡು ಕುರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಆರು ತಿಂಗಳ ಹಿಂದೆ ಮೋಟಾರು ಬೈಕ್ ಕದ್ದುನಂಬರ್ ಪ್ಲೇಟ್ ಬದಲಿಸಿ ಈ ದುಷ್ಕೃತ್ಯಕ್ಕೆ ಬಳಸಿದ್ದಾರೆ ಎಂದು ಮೈಸೂರು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಆರ್.ಚೇತನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣವನ್ನು ಪತ್ತೆ ಹಚ್ಚಿದ ಇನ್‌ಸ್ಪೆಕ್ಟರ್ ಕೃಷ್ಣಪ್ಪ, ಪಿಎಸ್‌ಐ ಕೃಷ್ಣಕಾಂತ ಕೋಳಿ, ಸಿಬ್ಬಂದಿ ಭಾಸ್ಕರ, ರಮೇಶ್, ಸಿ.ಪ್ರಭಾಕರ್, ಕೆ.ಜಿ.ಪ್ರಭಾಕರ್, ಗೋವಿಂದರಾಜು, ಮಾದೇಶ, ಮಹದೇವಶೆಟ್ಟಿ, ಮನು, ಮದನಕುಮಾರ್,ಮಾಳಪ್ಪ ಸೋಮನಾಳ ಅವರ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್.ಚೇತನ್ ಅವರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.