Advertisement
ಶಂಕಿತ ಆರೋಪಿ ಆದಿತ್ಯ ರಾವ್ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು ಅವರ ಮನೆ ಮಣ್ಣಪಳ್ಳದ ಹುಡ್ಕೋ ಕಾಲನಿಯಲ್ಲಿದೆ. ಆದರೆ ಕಳೆದ ಎಂಟು ತಿಂಗಳಿನಿಂದ ಹುಡ್ಕೋ ಕಾಲೋನಿಯ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಹಾಗಾಗಿ ಈ ಮನೆ ಖಾಲಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Related Articles
Advertisement
ಪತ್ನಿಯ ನಿಧನದ ನಂತರ ಆದಿತ್ಯ ರಾವ್ ತಂದೆ ಮಣಿಪಾಲದ ಈ ಮನೆಯನ್ನು ಖಾಲಿ ಬಿಟ್ಟು ಇನ್ನೋರ್ವ ಮಗನ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಆದಿತ್ಯ ರಾವ್ ಕಿರಿಯ ಸಹೋದರ ಕೂಡಾ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿದ್ದಾರೆ.
ಸೋಮವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಸಜೀವ ಬಾಂಬ್ ಇರುವುದು ಪತ್ತೆಯಾಗಿತ್ತು. ನಂತರದ ಕಾರ್ಯಾಚರಣೆಯಲ್ಲಿ ಅದನ್ನು ಕೆಂಜಾರು ಮೈದಾನದಲ್ಲಿ ನಿಯಂತ್ರಿತವಾಗಿ ಸ್ಫೋಟಿಸಲಾಗಿತ್ತು.
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಆಧರಿಸಿ ಶಂಕಿತನ ಫೋಟೋ ಒಂದನ್ನು ಪೊಲೀಸರು ಬಿಡುಗಡೆ ಮಾಡಿದ್ದರು.
ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರ ಕಚೇರಿಯಲ್ಲಿ ಆರೋಪಿ ಆದಿತ್ಯ ರಾವ್ ಶರಣಾಗಿದ್ದ.