Advertisement

ಖಾತೆ ಹಂಚಿಕೆ ಸಿಎಂ ಪರಮಾಧಿಕಾರ

11:33 AM Feb 10, 2020 | Suhan S |

ಹುಬ್ಬಳ್ಳಿ: ಸಂಪುಟ ಪುನಾರಚನೆ, ವಿಸ್ತರಣೆ, ಖಾತೆ ಹಂಚಿಕೆ ಸೇರಿದಂತೆ ಎಲ್ಲವೂ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಕೇಂದ್ರದ ನಾಯಕರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಆಗುತ್ತೆ. ಉಳಿದ ವಿಚಾರ ನನಗೆ ಗೊತ್ತಿಲ್ಲ. ಅದು ಸಿಎಂಗೆ ಬಿಟ್ಟ ವಿಚಾರ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆಲ್ಲ ಉತ್ತರ ಕೊಡಲು ಆಗಲ್ಲ. ಅವರು ಎಷ್ಟು ದುರ್ಬಲ ಎಂಬುದು ಜಗತ್ತಿಗೆ ಗೊತ್ತಿದೆ. ಐದು ವರ್ಷ ಸಿಎಂ ಆದ ಅವರು ಪ್ರತಿಪಕ್ಷ ನಾಯಕನಾಗ ಬೇಕೋ? ಶಾಸಕಾಂಗ ಪಕ್ಷದ ನಾಯಕನಾಗಬೇಕೋ?ಎರಡು ಹುದ್ದೆ ಕೊಡಬೇಕೋ? ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಕಾಂಗ್ರೆಸ್‌ನಲ್ಲಿ ಕಳೆದ ಐದಾರು ತಿಂಗಳಿಂದ ಗುದ್ದಾಟ ನಡೆಯುತ್ತಿದೆ. ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ರಾಜೀ ನಾಮೆ ಕೊಟ್ಟರು. ಯಾರನ್ನು ಯಾವುದಕ್ಕೆ ಆಯ್ಕೆ ಮಾಡ ಬೇಕೆನ್ನುವ ಗೊಂದಲದಲ್ಲಿ ಅವರಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕತ್ವ ದುರ್ಬಲವಾಗಿದೆ. ದೇಶದ ಯಾವ ರಾಜ್ಯದಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿ ಇಲ್ಲ. ಹೀಗಾಗಿ ಆ ಪಕ್ಷದ ಹೈಕಮಾಂಡ್‌ನ‌ವರು ನಿರ್ಧಾರ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಕಾರಣ ದುರ್ಬಲ ನಾಯಕ ಯಾರು ಎಂಬುದನ್ನು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಇನ್‌ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಕುರಿತು ಸಿದ್ಧತೆ ನಡೆದಿದೆ. ಈಗಾಗಲೇ ಮುಂಬೈ, ಹೈದರಾಬಾದ್‌, ಲಖನೌ ಸೇರಿದಂತೆ ಇನ್ನಿತರೆ ಪ್ರದೇಶ ಗಳಿಗೆ ತೆರಳಿ ಖ್ಯಾತ ಉದ್ಯಮದಾರರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. ಸಾವಿರಾರು ಉದ್ಯಮದಾರರನ್ನು ಇ-ಮೇಲ್‌ ಮೂಲಕ ಪತ್ರ ವ್ಯವಹಾರ ಮಾಡಿ ಆಹ್ವಾನಿಸಲಾಗಿದೆ. 400-500 ಉದ್ಯಮದಾರರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next