Advertisement

ಅಳಕೆಮಜಲು: ಸರಣಿ ಅಪಘಾತ; ಗಾಯ, ವಾಹನ ಜಖಂ

06:37 PM Jan 08, 2022 | Team Udayavani |

ವಿಟ್ಲ: ವಿಟ್ಲ ಪುತ್ತೂರು ರಸ್ತೆಯ ಅಳಕೆಮಜಲು ಎಂಬಲ್ಲಿ ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಇನೋವಾ ಕಾರಿಗೆ ಹಾಗೂ ನಿಲ್ಲಿಸಿದ್ದ ಬೈಕ್ ಗಳಿಗೆ ಢಿಕ್ಕಿ ಹೊಡೆದು ಸರಣಿ ಅಪಘಾತವಾದ ಘಟನೆ ಸಂಭವಿಸಿದೆ.

Advertisement

ವಿಟ್ಲ ಕಡೆಯಿಂದ ಪುತ್ತೂರು ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದು, ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳಿಗೆ ಢಿಕ್ಕಿಯಾಗಿದೆ. ಈ

ಅಪಘಾತದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಎರಡು ಕಾರಿನ ಮುಂಭಾಗ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ಸ್ವಿಫ್ಟ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು, ಒಂದು ಆಕ್ಟಿವಾ, ಒಂದು ಬೈಕ್ ಜಖಂಗೊಂಡಿದೆ ಎಂದು ತಿಳಿದು ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next