ಹಳೆಯಂಗಡಿ: ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಗ್ರಾಮದ ಭಾಸ್ಕರ ದೇವಾಡಿಗ ಅವರ ಮನೆಯ ಒಂದು ಪಾರ್ಶ್ವಕ್ಕೆ ಆಕಸ್ಮಿಕವಾಗಿ ಬಂದ ಸಿಡಿಲಿನಿಂದ ಬೆಂಕಿ ತಗಲಿ ಮನೆಯ ಒಳಗಿನ ಸೊತ್ತುಗಳು ಸುಟ್ಟು ಹೋದ ಘಟನೆ ಮೇ 30ರಂದು ಸಂಭವಿಸಿದೆ.
ಸಿಡಿಲು ನೇರವಾಗಿ ವಿದ್ಯುತ್ ಮೀಟರ್‌ಗೆ ಬಡಿದ್ದಿದರಿಂದ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮ ಕರಣಿಕರಿಗೆ ಮನೆಯವರು ಮಾಹಿತಿ ನೀಡಿದ್ದಾರೆ.
ಈ ಅನಾಹುತದಿಂದ ಮನೆಯಲ್ಲಿದ್ದ ಹಲವಾರು ಸೊತ್ತುಗಳು ಸುಟ್ಟಿದ್ದು, ಮೇಲ್ಛಾವಣಿಗೂ ಸಾಕಷ್ಟು ಹಾನಿಯಾಗಿದೆ.
ಬೆಂಕಿ ತಗಲಿದ ತತ್‌ಕ್ಷಣ ಸ್ಥಳೀಯರ ಸಹಕಾರದಿಂದ ನೀರು ಹಾಕಿ ಬೆಂಕಿಯನ್ನು ನಂದಿಸಿ ಹತೋಟಿಗೆ ತಂದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Related Articles
ಸ್ಥಳಕ್ಕೆ ಗ್ರಾಮ ಕರಣಿಕ ಮೋಹನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ನಷ್ಟದ ಅಂದಾಜಿನ ವರದಿ ಸಲ್ಲಿಸಿದ್ದಾರೆ.