Advertisement
ಗುರುವಾರ ಮಧ್ಯಾಹ್ನ ಸ್ಥಳೀಯ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿಯಲ್ಲಿ ವಿದ್ಯುತ್ ತಂತಿಯ ಮೇಲೆ ತೆಂಗಿನ ಗರಿ ಬಿದ್ದು ಅದರಿಂದ ಬೆಂಕಿಯ ಕಿಡಿಯೊಂದು ಒಣ ಪ್ರದೇಶದಲ್ಲಿದ್ದ ಒಣಹುಲ್ಲಿಗೆ ಹಬ್ಬಿತ್ತು. ಏಕಾಏಕಿ ಸುತ್ತಮುತ್ತ ದಟ್ಟ ಹೊಗೆ ಯಂತಾಗಿ ಸ್ಥಳೀಯವಾಗಿ ಬೆಂಕಿಯ ಕೆನ್ನಾಲಿಗೆ ಹರಡಿತ್ತು. ಹಳೆಯಂಗಡಿ ಗ್ರಾ. ಪಂ. ಸದಸ್ಯ ವಿನೋದ್‌ಕುಮಾರ್ ಕೊಳುವೈಲು ಅವರು ಮಂಗಳೂರಿನ ಅಗ್ನಿಶಾಮಕ ಕೇಂದ್ರಕ್ಕೆ ಮಾಹಿತಿ ನೀಡಿದರು. ಈ ನಡುವೆ ಸ್ಥಳೀಯ ಹಳೆಯಂಗಡಿ ಫ್ರೆಂಡ್ಸ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದರು.
ಹಳೆಯಂಗಡಿ ಮುಖ್ಯ ಪೇಟೆಯಿಂದ ಕೊಳುವೈಲು ರಸ್ತೆ ತಿರುವು ತೀವ್ರ ಇಕ್ಕಟ್ಟಾಗಿದ್ದು ಅಗ್ನಿಶಾಮಕ ದಳದ ವಾಹನವು ತಿರುವಿನಲ್ಲಿಯೇ ಸಿಲುಕಿಕೊಂಡು ಕ್ಷಣಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು ಕೊನೆಗೆ ಹತ್ತಾರು ಬಾರಿ ಮುಂದೆ ಹಿಂದೆ ಚಲಿಸಿ ಬೆಂಕಿ ಬಿದ್ದಿರುವ ಸ್ಥಳಕ್ಕೆ ತೆರಳಿತು.