ಶಹಾಪುರ: ನಗರದ ರಾಮಗಿರಿ ಮಠದ ಆವರಣದಲ್ಲಿರುವ ಪುರಾತನ ಹುಣಸೆ ಮರಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಸೋಮವಾರ ನಡೆದಿದೆ.
ರವಿವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ಕರ್ತವ್ಯದಲ್ಲಿ ನಿರತರಾಗಿದ್ದ ಜೆಸ್ಕಾಂ ಸಿಬ್ಬಂದಿ ಸಮರ್ಪಕ ಪರಿಹಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 200 ವರ್ಷದ ಹಳೇ ಹುಣಸೆ ಮರಗಳು ಇಲ್ಲಿನ ರಾಮಗಿರಿ ಮಠದ ಆವರಣದಲ್ಲಿವೆ. ಪ್ರತಿ ವರ್ಷ ಸಾಕಷ್ಟು ಹುಣಸೆ ಹಣ್ಣು ಒದಗಿಸುತ್ತಿದ್ದವು ಎನ್ನಲಾಗಿದೆ. ಆವರಣದಲ್ಲಿ ಹತ್ತಾರು ಹುಣಸೆ ಮರಗಳಿದ್ದು, ಅದರಲ್ಲಿರುವ ದೊಡ್ಡ ಮರವೊಂದು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಉಳಿದ ಮರಗಳಿಗೂ ಬಿಸಿ ತಟ್ಟಿದೆ.
ಅಷ್ಟರಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿರುವ ಕಾರಣ ಉಳಿದ ಮರಗಳ ಜೀವ ಬದುಕಿಕೊಂಡಿದೆ. ಬೆಂಕಿಗೆ ಆಹುತಿಯಾದ ದೊಡ್ಡ ಹುಣಸೆ ಮರ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸರಬರಾಜಿಗೆ ತೊಂದರೆಯಾಗಿತ್ತು ಎನ್ನಲಾಗಿದೆ. ಶ್ರೀಮಠದ ಪಕ್ಕದ ಜಮೀನಿನಲ್ಲಿ ಕಸಕಡ್ಡಿ ಜಮಾಯಿಸಿ ಮಠದ ಹತ್ತಿರವೇ ಒಡ್ಡಿನಲ್ಲಿ ಬೆಂಕಿ ಹಚ್ಚಲಾಗಿದೆ. ಅದೇ ಬೆಂಕಿ ಗಾಳಿ ರಬಸಕ್ಕೆ ಹುಣಸೆ ಮರಕ್ಕೆ ಹೊತ್ತಿಕೊಂಡಿದೆ ಎನ್ನಲಾಗಿದೆ. ಜೆಸ್ಕಾಂ ಶಾಖಾ ಅಧಿಕಾರಿ ಎಕ್ಬಾಲ್, ಲೈನ್‌ಮನ್‌ಗಳಾದ ನಾರಾಯಣ, ರಾಮದಾಸ, ರಾಮನಗೌಡ, ಶಬ್ಬೀರ್ ಮತ್ತು ಮೆಕಾನಿಕ್ ಶಿವಲಿಂಗ, ಇಮಾಂ ಘಟನಾ ಸ್ಥಳದಲ್ಲಿ ಬಿದ್ದಿರುವ ಮರದ ಟೊಂಗೆ ಕತ್ತರಿಸಿ ವಿದ್ಯುತ್ ವೈರ್ ಬೇರ್ಪಡಿಸಿ ಬಾಗಿದ ವಿದ್ಯುತ್ ಕಂಬಗಳನ್ನು ಸರಿಪಡಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿದರು.
Advertisement
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ರವಿವಾರ ರಾತ್ರಿಯೇ ಮರಕ್ಕೆ ಬೆಂಕಿ ತಗುಲಿದ್ದು, ಅವಾಗಲೇ ಅಲ್ಲಿನ ನಿವಾಸಿಗಳು ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿದ್ದರಿಂದ ಕಂಬ ಬೆಂಡಾಗಿದೆ. ಅಲ್ಲದೆ ತಂತಿಗಳು ಕೆಳಗೆ ಜೋತು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಜೆಸ್ಕಾಂ ಸಿಬ್ಬಂದಿ