ಹುಣಸೂರು: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಮೂರು ದನಗಳು ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಮುಳ್ಳೂರಿನಲ್ಲಿ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಗ್ರಾಮದ ನಿವಾಸಿ ಜಯಮ್ಮ ಅವರಿಗೆ ಸೇರಿದ ಹಸುಗಳು ಸಾವನ್ನಪ್ಪಿದ್ದು, ಸುಮಾರು 3 ಲಕ್ಷರೂ ನಷ್ಟ ಸಂಭವಿಸಿದೆ.
ಎಂದಿನಂತೆ ಸೊಳ್ಳೆಗಾಗಿ ಪಾತ್ರೆಯಲ್ಲಿ ಸ್ವಲ್ಪ ಬೆಂಕಿ ಹಾಕಿ ಮಲಗಿದ್ದರು. ಗಾಳಿಯಿಂದ ಬೆಂಕಿ ಕಿಡಿ ಕೊಟ್ಟಿಗೆಯ ಮೇಲ್ಛಾವಣಿಗೆ ಹಾರಿ ಬೆಂಕಿ ಹತ್ತಿಕೊಂಡಿದ್ದು. ಮನೆಯವರು ಎಚ್ಚರಗೊಳ್ಳುವಷ್ಟರಲ್ಲಿ ಬೆಂಕಿ ಇಡೀ ಕೊಟ್ಟಿಗೆಗೆ ವ್ಯಾಪಿಸಿದ್ದಲ್ಲದೆ, ಕೊಟ್ಟಿಗೆಯಲ್ಲಿದ್ದ ಹಸುಗಳು ಸಾವನ್ನಪ್ಪಿದೆ.
ಇದನ್ನೂ ಓದಿ: ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ಗೆ ಮಾತೃ ವಿಯೋಗ
ಕೆ.ಆರ್.ನಗರ ಹಾಗೂ ಹುಣಸೂರು ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬಂದಿಗಳು ಬರುವ ವೇಳೆಗೆ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿತ್ತು. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.