Advertisement
ಮಧ್ಯಾಹ್ನ 2.40ರ ಸುಮಾರಿಗೆ ನೆಲಮಹಡಿಯಲ್ಲಿರುವ ಮೆಟ್ಟಿಲುಗಳ ಸಮೀಪದ ವಿದ್ಯುತ್ ಸಂಪರ್ಕದ ಸ್ವಿಚ್ ಬೋರ್ಡ್‌ನಲ್ಲಿ ಆಕಸ್ಮಿಕವಾಗಿ ವಿದ್ಯುತ್ ಕಾಣಿಸಿಕೊಂಡು ವೈರ್‌ಗಳು ಸುಡುತ್ತಿದ್ದಂತೆ ದಟ್ಟ ಹೊಗೆ ಕಾಣಿಸಿಕೊಳ್ಳಲಾರಂಭಿಸಿದೆ. ಇದನ್ನು ಗಮನಿಸಿದ ಕಟ್ಟಡದೊಳಗಿನ ಸಿಬ್ಬಂದಿ ಸಹಾಯಕ್ಕೆ ಕಿರುಚಿಕೊಂಡಿದ್ದಾರೆ. ಪಕ್ಕದಲ್ಲಿಯೇ ಇರುವ ಬಾರ್ಟನ್ ಕಟ್ಟಡ ನಿರ್ವಹಣೆ ಸಿಬ್ಬಂದಿಯೂ ಗಮನಿಸಿ ಕೂಡಲೇ 25 ಅಗ್ನಿ ನಂದಕ ಸಿಲಿಂಡರ್‌ಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ನಂದಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಕೈ ಜೋಡಿಸಿದ್ದಾರೆ.
Related Articles
Advertisement
ಶಾರ್ಟ್ ಸರ್ಕಿಟ್ ಸಾಧ್ಯತೆ: ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅಗ್ನಿಶಾಮಕ ದಳ ವಿಭಾಗದ ಎಡಿಜಿಪಿ ಸುನೀಲ್ ಅಗರ್‌ವಾಲ್, ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆಯಿದೆ. ನಿಖರ ಕಾರಣ ಪತ್ತೆಗೆ ತನಿಖೆ ನಡೆಸಲಾಗುತ್ತದೆ. ಜತೆಗೆ ಕಟ್ಟಡದಲ್ಲಿ ಮುಂಜಾಗ್ರತಾ ಕ್ರಮಗಳು, ನಿರಾಕ್ಷೇಪಣಾ ಪತ್ರಪಡೆಯಲಾಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಸಮಯಪ್ರಜ್ಞೆ ಮೆರೆದ ಮೌಲಾನ ಅಲಿ: “ಫರಾ ಟವರ್‌ನಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿದ ಕೂಡಲೇ ನಮ್ಮ ಮೂರ್‍ನಾಲ್ಕು ಸಿಬ್ಬಂದಿಯನ್ನು ಕರೆದುಕೊಂಡು 25 ಅಗ್ನಿನಂದಕ ಸಿಲಿಂಡರ್‌ಗಳ ಸಮೇತ ಓಡಿದೆ. ದಟ್ಟಹೊಗೆ ಏನೂ ಕಾಣಿಸುತ್ತಿರಲಿಲ್ಲ. ಹೊಗೆಯಲ್ಲಿಯೇ ವಿದ್ಯುತ್ ನಿಯಂತ್ರಣ ಇರುವ ಕೊಠಡಿಗೆ ನುಗ್ಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಬಳಿಕ ಸಿಲಿಂಡರ್‌ಗಳ ಮೂಲಕ ಬೆಂಕಿ ನಂದಿಸಿ, ಕಟ್ಟಡದ ಒಳಗಿದ್ದವರಿಗೆ ಮೆಟ್ಟಿಲುಗಳ ಮೂಲಕ ಇಳಿಯುವಂತೆ ಮನವಿ ಮಾಡಿಕೊಂಡೆವು. ಎಲ್ಲರೂ ಸುರಕ್ಷಿತವಾಗಿ ಹೊರಗೆ ಬಂದರು,’ ಎಂದು ಬಾರ್ಟನ್ ಕಟ್ಟಡ ನಿರ್ವಹಣೆ ಮಾಡುವ ಮೌಲಾನ ಅಲಿ ವಿವರಿಸಿದರು. “ಫರಾ ಟವರ್ ಕಟ್ಟಡದಲ್ಲಿ ಬೆಂಕಿ ನಂದಿಸುವ ಸಾಧನಗಳು ಇರಲಿಲ್ಲ. ಹೀಗಾಗಿ ನಮ್ಮದೇ ಅಗ್ನಿ ನಂದಕಗಳನ್ನು ಬಳಸಿದೆವು. ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ ಎಂಬ ಸಮಾಧಾನವಿದೆ,’ ಎಂದು ಅಲಿ ಹೇಳಿದರು.