Advertisement

ಅಪಘಾತ ವಲಯವಾಗುತ್ತಿದೆ ಪೆರಂಪಳ್ಳಿ ರಸ್ತೆ

08:26 PM Nov 12, 2021 | Team Udayavani |

ಉಡುಪಿ: ಸ್ಥಗಿತಗೊಂಡಿರುವ ಅಂಬಾಗಿಲು- ಪೆರಂಪಳ್ಳಿ-ಮಣಿಪಾಲ ರಿಂಗ್‌ ರೋಡ್‌ ಚತುಷ್ಪಥ ಕಾಮಗಾರಿ ಈಗ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

Advertisement

ಒಂದೆಡೆ ಹೊಂಡ-ಗುಂಡಿಗಳಿಂದ ಕೂಡಿರುವ ರಸ್ತೆ ಇದ್ದರೆ ಮತ್ತೆ ಕೆಲವೆಡೆ ಡಾಮರು ರಸ್ತೆ ಇದೆ. ಇದರ ಅರಿವಿಲ್ಲದ ಚಾಲಕರು ಅತೀ ವೇಗದಿಂದ ತೆರಳುವ ಸಂದರ್ಭದಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ಸೋಮ ವಾರವೂ ಪೆರಂಪಳ್ಳಿಯ ಟ್ರಿನಿಟಿ ತಿರುವು ಪ್ರದೇಶದಲ್ಲಿ ಕಾರೊಂದು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಕಡಿದಾದ ತಿರುವಿನಲ್ಲಿ ಒಮ್ಮೆಲೆ ವಾಹನ ತಿರುಗಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸೂಚನ ಫ‌ಲಕವಿಲ್ಲ:

ಒಂದೆಡೆ ಪೂರ್ಣಗೊಳ್ಳದ ಕಾಮ ಗಾರಿ, ಮತ್ತೂಂದೆಡೆ ನಿರ್ದಿಷ್ಟ ನಾಮ ಫ‌ಲಕ ಅಳವಡಿಕೆ ಮಾಡದಿರುವ ಕಾರಣ ಸವಾರರು ಈ ಭಾಗದಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ.

ದ್ವಿಚಕ್ರ ಸವಾರರಿಗೂ ಕಷ್ಟಕರ ಕಾಮಗಾರಿ ನಿಲುಗಡೆಯಾಗಿರುವ ಸ್ಥಳಗಳಲ್ಲಿ ಹೊಂಡಗುಂಡಿಗಳಿಂದ ತುಂಬಿಹೋಗಿರುವ ಕಾರಣದಿಂದಾಗಿ ಹಾಗೂ ಕಲ್ಲುಗಳು ಚದುರಿ ಹೋಗಿರು ವುದರಿಂದಾಗಿ ದ್ವಿಚಕ್ರ ವಾಹನ  ಸವಾರರು ಭಯದಿಂದಲೇ ಸವಾರಿ ಮಾಡಬೇಕಾಗಿದೆ. ಮಳೆ ಬಂದರೆ ಹೊಂಡಗಳಲ್ಲಿ ನೀರು ನಿಂತು ರಸ್ತೆಯೂ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ ಎನ್ನುತ್ತಾರೆ ವಾಹನ ಸವಾರರು.

Advertisement

ರಸ್ತೆ ಕಾಮಗಾರಿ , ಹೊಂಡ-ಗುಂಡಿಗಳನ್ನು ಮುಚ್ಚಲೂ ಕ್ರಮ ತೆಗೆದುಕೊಳ್ಳಲಾಗುವುದು. ವೇಗಮಿತಿ ಫ‌ಲಕಗಳನ್ನೂ ಕಾಮಗಾರಿ ಸಂಪೂರ್ಣಗೊಂಡ ಬಳಿಕ ಅಳವಡಿಸಲಾಗುವುದು. ಎಚ್ಚರಿಕೆ ಫ‌ಲಕ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು.  -ಜಗದೀಶ್‌ ಭಟ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ  ಉಪವಿಭಾಗ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next