Advertisement

ಫುಟ್‌ಪಾತ್‌ ಮೇಲೆ ಅಪಘಾತ ವಾಹನ ನಿಲುಗಡೆ

05:14 PM Apr 11, 2021 | Team Udayavani |

ಕುಣಿಗಲ್‌: ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ನಿಯಮ ಪಾಲಿಸಬೇಕಾದಪೊಲೀಸರೇ ಇದಕ್ಕೆ ತದ್ವಿರುದ್ಧವಾಗಿಅಪಘಾತವಾದ ಹತ್ತಾರು ವಾಹನಗಳನ್ನು ಠಾಣೆಯ ಮುಂಭಾಗದ ಫುಟ್‌ಪಾತ್‌ನಲ್ಲಿ ನಿಲ್ಲಿಸಿ, ಸಾರ್ವಜನಿಕರ ಹಾಗೂ ವಾಹನಗಳಸಂಚಾರಕ್ಕೆ ಅಡಚಣೆ ಉಂಟು ಮಾಡಿರುವುದು ನಾಗರಿಕರ ಚರ್ಚೆಗೆ ಗ್ರಾಸವಾಗಿದೆ.

Advertisement

ಅಪಘಾತಗಳ ನಿಯಂತ್ರಣಕ್ಕಾಗಿ ಕೇಂದ್ರಸರ್ಕಾರ ಮೋಟರ್‌ ವಾಹನ ಕಾಯ್ದೆ ಜಾರಿಗೆತಂದಿದೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದುಹಾಗೂ ಶಿಕ್ಷೆ ಕೊಡುವುದು ಕಾನೂನು ಕಾಯ್ದೆಯಲ್ಲಿ ಅವಕಾಶವಿದೆ. ಈನಿಯಮವನ್ನು ಪರಿಣಾಮಕಾರಿಯಾಗಿಅನುಷ್ಠಾನಗೊಳಿಸಿ ನಾಗರಿಕರ ಹಾಗೂವಾಹನಗಳ ಸುಗಮ ಸಂಚಾರಕ್ಕೆ ಅನುಮಾಡಿಕೊಡುವ ಕರ್ತವ್ಯ ಪೊಲೀಸರದ್ದಾಗಿದೆ.

ಆದರೆ, ಕುಣಿಗಲ್‌ ಪಟ್ಟಣದ ಪೊಲೀಸರುಅಪಘಾತವಾದ ಹತ್ತಾರು ವಾಹನಗಳನ್ನುಠಾಣೆಯ ಮುಂಭಾಗದ ಫುಟ್‌ಪಾತ್‌ ಮೇಲೆನಿಲ್ಲಿಸಿ ಸಂಚಾರ ನಿಯಮ ಗಾಳಿಗೆತೂರಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್‌ ಠಾಣಾ ಮುಭಾಗದ ರಸ್ತೆ ಹಳೆಯ ರಾಷ್ಟ್ರೀಯ ಹೆದ್ದಾರಿ 48ರ ಬಿ.ಎಂರಸ್ತೆಯಲ್ಲಿ ಹಾದು ಹೋಗಿದೆ. ಈ ಮಾರ್ಗದಲ್ಲಿನಿತ್ಯ ವಿದ್ಯಾರ್ಥಿಗಳು, ರೋಗಿಗಳು,ವಯೋವೃದ್ಧರು, ವಿಚೇತನರು, ಮಹಿಳೆಯರುತಿರುಗಾಡುತ್ತಿದ್ದಾರೆ. ಅಲ್ಲದೆ ನೂರಾರು ವಾಹನಸಂಚರಿಸುತ್ತಿವೆ. ಆದರೆ, ಅಪಘಾತಕ್ಕೆ ಒಳಗಾಗಿರುವ ವಾಹನಗಳನ್ನು ಫುಟ್‌ಪಾತ್‌ಮೇಲೆ ನಿಲ್ಲಿಸಿರುವುದರಿಂದ ಪಾದಾಚಾರಿಗಳು ಭಯದ ವಾತಾವರಣದಲ್ಲಿ ರಸ್ತೆಯಲ್ಲಿ ತಿರುಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪುರಸಭೆ ತಾರತಮ್ಯ: ಪಟ್ಟಣದ ತುಮಕೂರು ರಸ್ತೆ, ಬಿ.ಎಂ ರಸ್ತೆ ಸೇರಿದಂತೆ ಪಟ್ಟಣದ ಹಲವುಪ್ರದೇಶದ ವ್ಯಾಪಾರಿಗಳು ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಪೆಟ್ಟಿ ಅಂಗಡಿ ಇಟ್ಟುಕೊಂಡುವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದನಾಗರಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಪುರಸಭಾಅಧಿಕಾರಿಗಳು ತುಮಕೂರು ರಸ್ತೆ ಕೃಷಿ, ಪಶು ಸಂಗೋಪನ ಇಲಾಖೆ ಮುಂಭಾಗ ಹಾಗೂಕಾಂಗ್ರೆಸ್‌ ಕಚೇರಿ ನಿವೇಶನದ ಮುಂಭಾಗದ ಫುಟ್‌ಪಾತ್‌ ಮೇಲೆ ಇಟ್ಟಿದ ಪೆಟ್ಟಿಅಂಗಡಿಗಳನ್ನು ತೆರವುಗೊಳಿಸಿದರು. ಆದರೆ, ಪಟ್ಟಣದ ಪೊಲೀಸ್‌ ಠಾಣೆಯ ಮುಂಭಾಗದಫುಟ್‌ಪಾತ್‌ನಲ್ಲಿ ಅಪಘಾತಕ್ಕೆ ಒಳಗಾದಹತ್ತಾರು ವಾಹನಗಳನ್ನು ನಿಲ್ಲಿಸಿರುವುದು, ಪುರಸಭಾ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇಎಂದು ಪ್ರಶ್ನಿಸಿರುವ ನಾಗರಿಕರು, ಬಡ ವ್ಯಾಪಾರಿಗಳಿಗೊಂದು ನ್ಯಾಯ, ಪೊಲೀಸರಿಗೆಒಂದು ನ್ಯಾಯ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಈ ಸಂಬಂಧ ಕ್ರಮಕೈಗೊಂಡುಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಅಪಘಾತವನ್ನು ತಡೆಗಟ್ಟಿ ನಾಗರಿಕರಿಗೆಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಠಾಣೆ ಮುಂಭಾಗದ ಫುಟ್‌ ಪಾತ್‌ ಮೇಲೆ ಅಪಘಾತವಾದವಾಹನಗಳು ನಿಲ್ಲಿಸಿರುವುದು ಗಮನಕ್ಕೆಬಂದಿದೆ. ವಾಹನಗಳ ನಿಲುಗಡೆಗೆಸ್ಥಳಾವಕಾಶ ಇಲ್ಲದ ಕಾರಣತಾತ್ಕಾಲಿಕವಾಗಿ ವಾಹನಗಳನ್ನುನಿಲ್ಲಿಸಲಾಗಿದೆ. ಶೀಘ್ರದಲ್ಲೇ ವಾಹನ ತೆರವುಗೊಳಿಸುವುದ್ದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.-ಕೆ.ಪಿ.ರವಿಕುಮಾರ್‌, ಮುಖ್ಯಾಧಿಕಾರಿ ಪುರಸಭೆ

ರಸ್ತೆ ಠಾಣೆ ಮುಂಭಾಗದ ರಸ್ತೆ ಪಕ್ಕದಲ್ಲಿ ನಿಲ್ಲಿಸಿರುವ ಅಪಘಾತವಾದ ವಾಹನಗಳನ್ನುಒಂದು ನಿರ್ದಿಷ್ಟವಾದ ಸ್ಥಳ ಗುರುತಿಸಿಅಲ್ಲಿಗೆ ಕೂಡಲೇ ಸ್ಥಳಾಂತರಿಸಿ,ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಕೆ.ಎಲ್‌. ಸತೀಶ್‌ಗೌಡ, ವಕೀಲ

 

-ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next