Advertisement

ಪ್ರತಿಫಲಕ ಇಲ್ಲದ ಬ್ಯಾರಿಕೇಡ್‌ಗಳಿಂದ ಅಪಘಾತ ಭೀತಿ

10:24 PM Mar 14, 2020 | mahesh |

ಬೆಳ್ತಂಗಡಿ/ಮುಂಡಾಜೆ: ಶಾಲಾ- ಕಾಲೇಜುಗಳ ಬಳಿ, ವಾಹನ ತಪಾಸಣೆ ವೇಳೆ, ಅಡ್ಡರಸ್ತೆಗಳಿರುವ ಕಡೆ, ರಸ್ತೆ ಕುಸಿತಗಳು ಸಂಭವಿಸಿದಲ್ಲಿ, ವಾಹನಗಳ ವೇಗ ತಡೆಗೆ ಮತ್ತು ರಸ್ತೆ ಸುರಕ್ಷಾ ಹಿನ್ನೆಲೆಯಲ್ಲಿ ಹೆದ್ದಾರಿ, ಜಿ.ಪಂ. ರಸ್ತೆ, ಗ್ರಾ.ಪಂ. ರಸ್ತೆಗಳಲ್ಲಿ ಪೊಲೀಸ್‌ ಇಲಾಖೆ ಅಳವಡಿಸುತ್ತಿರುವ ಬ್ಯಾರಿಕೇಡ್‌ಗಳೇ ವಾಹನ ಸವಾರರಿಗೆ ಕುತ್ತಾಗಿ ಪರಿಣಮಿಸುತ್ತಿವೆ.

Advertisement

ನಿಗದಿತ ಸ್ಥಳಗಳಲ್ಲಿ ಅಪಘಾತ ತಡೆಗೆ ಸಹಕಾರಿ ಯಾಗುವ ಉದ್ದೇಶದಿಂದ ಅಳವಡಿಸ ಲಾಗುವ ಬ್ಯಾರಿಕೇಡ್‌ಗಳು ಬಣ್ಣ ಮಾಸಿರು ವುದಲ್ಲದೆ, ಪ್ರತಿಫಲಿಸಿದೇ ಇರುವುದರಿಂದ ರಾತ್ರಿ ಹೊತ್ತು ಹೆದ್ದಾರಿಗಳಲ್ಲಿ ವೇಗವಾಗಿ ಸಂಚರಿಸುವ ಬೈಕ್‌ ಸವಾರರು ಜೀವಹಾನಿಗೆ ತುತ್ತಾಗುತ್ತಿದ್ದಾರೆ. ಮತ್ತೂಂದೆಡೆ ಬ್ಯಾರಿಕೇಡ್‌ಗಳನ್ನು ಒಂದರಿಂದ ಇನ್ನೊಂದು ಬ್ಯಾರಿಕೇಡ್‌ಗೆ ಅಂತರವನ್ನು ಪಾಲಿಸದೆ ಇರುವುದು ವಾಹನ ಸವಾರರಿಗೆ ಸವಾಲಾಗಿದೆ.

ಹೆಚ್ಚಾಗಿ ಚಾರ್ಮಾಡಿ, ಉಜಿರೆ ಶಾಲಾ- ಕಾಲೇಜು, ಕನ್ಯಾಡಿ ಶ್ರೀರಾಮ ಮಂದಿರ ಸಹಿತ ಆಯಕಟ್ಟು ಪ್ರದೇಶಗಳಲ್ಲಿ ಇರಿಸಲಾಗುತ್ತಿರುವ ಬ್ಯಾರಿಕೇಡ್‌ಗಳು ಸ್ಥಳಾಂತರಿಸುವಾಗಲೂ ರಸ್ತೆ ಬದಿಯಲ್ಲೇ ಬೇಕಾಬಿಟ್ಟಿ ಇಡುವ ಪರಿಣಾಮ ಸುಗಮ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಮತ್ತೂಂದೆಡೆ ತಿರುವುಗಳಲ್ಲಿ ಬ್ಯಾರಿಕೇಡ್‌ ಇರಿಸು ವುದರಿಂದ ವಾಹನ ಸವಾರರು ಗಮನಿಸದೆ ಆಪಘಾತಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಕನ್ಯಾಡಿ ಬಳಿ ರಾತ್ರಿ ಬ್ಯಾರಿಕೇಡ್‌ ತೆರವುಗೊಳಿಸದ್ದರಿಂದ ಬೈಕ್‌ ಸವಾರರೋರ್ವರು ಗಂಭೀರವಾಗಿ ಗಾಯ ಗೊಂಡಿದ್ದರು.

ಅವೈಜ್ಞಾನಿಕ ರೀತಿಯಲ್ಲಿ ಇರುವ ಬ್ಯಾರಿಕೇಡ್‌ಗಳನ್ನು ಬದಲಾಯಿಸಿ, ವ್ಯವಸ್ಥಿತವಾದ ರೀತಿಯಲ್ಲಿ ಉತ್ತಮ ಗುಣಮಟ್ಟದ ಬ್ಯಾರಿಕೇಡ್‌ಗಳನ್ನು ಅಳ ವಡಿಸಿದರೆ ವಾಹನ ಸವಾರರಿಗೆ ಹಾಗೂ ಸುಗಮ ಸಂಚಾರಕ್ಕೂ ಅನುಕೂಲವಾದೀತು.

ಚಾರ್ಮಾಡಿ ಅಪಾಯಕಾರಿ
ಮೂಡಿಗೆರೆ ಉಜಿರೆ ರಾಜ್ಯ ಹೆದ್ದಾರಿಯ ಚಾರ್ಮಾಡಿ ಚೆಕ್‌ ಪೋಸ್ಟ್‌, ಮುಂಡಾಜೆ ಭಿಡೆ ರಸ್ತೆಯಲ್ಲಿರುವ ಬ್ಯಾರಿಕೇಡ್‌ಗಳು ರಾತ್ರಿ ಸಮಯದಲ್ಲಿ ಅತ್ಯಂತ ಅಪಾಯಕಾರಿ. ಇಲ್ಲಿ ಇರಿಸಿರುವ ಬ್ಯಾರಿಕೇಡ್‌ಗಳ ಬಣ್ಣವು ಸಂಪೂರ್ಣ ಮಾಸಿ ಹೋಗಿದೆ. ಪ್ರತಿಫಲನ ಸ್ಟಿಕ್ಕರ್‌ ಕೂಡ ಇಲ್ಲ. ಒಂದು ವೇಳೆ ಸ್ಟಿಕ್ಕರ್‌ ಇದ್ದರೂ ಅದು ಪ್ರತಿಫಲನ ಶಕ್ತಿಸಂಪೂರ್ಣ ಕಳೆದುಕೊಂಡಿದೆ. ಇದರಿಂದ ಈ ಪ್ರದೇಶದಲ್ಲಿ ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಹತ್ತಿರ ಬರುವವರೆಗೂ ಬ್ಯಾರಿಕೇಡ್‌ಗಳು ಗಮನಕ್ಕೆ ಬರುವುದಿಲ್ಲ. ಸರಿಯಾಗಿ ಅಳವಡಿಸಲು ಸಾಧ್ಯವಾಗದ ಬ್ಯಾರಿ ಕೇಡ್‌ಗಳನ್ನು ಅವು ಅಡªಬೀಳದಂತೆ ದೊಡ್ಡ ದೊಡ್ಡ ಕಲ್ಲುಗಳನ್ನು ಆಧಾರವಾಗಿ ನಿಲ್ಲಿಸಿರುವುದು ಇದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.

Advertisement

 ಶೀಘ್ರ ಕ್ರಮ
ಬ್ಯಾರಿಕೇಡ್‌ಗಳು ಬಣ್ಣ ಮತ್ತು ಪ್ರತಿಫಲನ ಕಳೆದುಕೊಂಡಿರುವುದನ್ನು ಗಮನಿಸಲಾಗಿದೆ. ಸದ್ಯದಲ್ಲೇ ನೂತನ ಬ್ಯಾರಿಕೇಡ್‌ಗಳನ್ನು ವ್ಯವಸ್ಥಿತವಾಗಿ ಅಳವಡಿಸುವ ಕೆಲಸ ಆಗಲಿದೆ.
– ಓಡಿಯಪ್ಪ ಗೌಡ, ಪೊಲೀಸ್‌ ಉಪನಿರೀಕ್ಷಕರು, ಧರ್ಮಸ್ಥಳ ಠಾಣೆ

ಅಪಾಯಕಾರಿ
ಬ್ಯಾರಿಕೇಡ್‌ಗಳು ಸಂಪೂರ್ಣ ಹಾಳಾಗಿವೆ, ವಾಹನ ಚಲಾಯಿ ಸುವಾಗ ಅವುಗಳ ಇರುವಿಕೆ ಗಮನಕ್ಕೆ ಬರುತ್ತಿಲ್ಲ ವಾಹನ ಸಂಚಾರಕ್ಕೆ ಇವು ತೀವ್ರ ಅಪಾಯಕಾರಿಯಾಗಿವೆ.
 - ರವಿ ಚಾರ್ಮಾಡಿ, ಟೆಂಪೋ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next