Advertisement

Road mishap: ಅಯೋಧ್ಯೆ ಸಮೀಪ ಅಪಘಾತ; ಕಲಬುರಗಿಯ ಮೂವರ ಸಾವು

09:59 PM May 25, 2024 | Team Udayavani |

ಕಲಬುರಗಿ: ಅಯೋಧ್ಯೆ ಬಳಿ ಶುಕ್ರವಾರ ರಾತ್ರಿ ಲಾರಿ ಮತ್ತು ಟೆಂಪೋ ನಡುವೆ ಮುಖಾಮುಖೀ ಡಿಕ್ಕಿ ಸಂಭವಿಸಿದ ಪರಿಣಾಮ ಕಲಬುರಗಿ ಮೂಲದ ಮೂವರು ಭಕ್ತರು ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಈ ದುರ್ಘ‌ಟನೆಯಲ್ಲಿ ಇನ್ನು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಗೊತ್ತಾಗಿದ್ದು, ಈ ಪೈಕಿ ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರನ್ನು ಶಿವರಾಜ್‌, ಕಾಶಿನಾಥ, ತಂಗಮ್ಮ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಅಯೋಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ವಾರಣಾಸಿಯ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ 22 ಜನರಿದ್ದ ಕುಟುಂಬವೊಂದು ಟೆಂಪೋ ಟ್ರ್ಯಾ ಕ್ಸ್‌ ನಲ್ಲಿ ಹೊರಟಿತ್ತು. ಈ ಟೆಂಪೋ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಎಸ್‌ಪಿ ಹೇಳಿಕೆ: ಈ ಕುರಿತು ಕಲಬುರಗಿ ಎಸ್‌ಪಿ ಅಕ್ಷಯ ಹಾಕೆ ಅವರನ್ನು “ಉದಯವಾಣಿ’ ಸಂಪರ್ಕಿಸಿದಾಗ ಅಯೋಧ್ಯೆಯಲ್ಲಿ ಮೃತಪಟ್ಟ ಮೂವರ ಕುರಿತು ನಮಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಇತರೆ ಕೆಲವು ಖಾತ್ರಿ ಅಲ್ಲದ ಮೂಲಗಳಿಂದ ಮೇಲ್ನೋಟಕ್ಕೆ ಮೃತಪಟ್ಟವರು ಕಲಬುರಗಿಯವರು ಎಂದು ಗೊತ್ತಾಗಿದೆ. ಈ ಕುರಿತು ಅವರ ಕುಟುಂಬದವರು ಯಾರೂ ಇನ್ನೂ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next