Advertisement

ಕೊಪ್ಪಳ: ಕಾರು-ಸ್ಕೂಟಿ ಮುಖಾಮುಖಿ ಢಿಕ್ಕಿ: ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲೇ ಸಾವು

02:45 PM Apr 11, 2022 | Team Udayavani |

ಕೊಪ್ಪಳ: ಕಾರು-ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಸಂಸದ ಸಂಗಣ್ಣ ಕರಡಿ ಅವರ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಟಣಕನಕಲ್ ನಲ್ಲಿ ಸೋಮವಾರ ನಡೆದಿದೆ.

Advertisement

ರಸ್ತೆ ಅಪಘಾತದಲ್ಲಿ ಬಸಣ್ಣ ಅಮರಪ್ಪ ಕರಡಿ(60) ಸಾವನ್ನಪ್ಪಿದ್ದಾರೆ.  ತಾಲೂಕಿನ ಟಣಕನಕಲ್ ಬಳಿ  ಕಾರು-ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲಿದ ಬಸಪ್ಪ ಅಮರಪ್ಪ ಕರಡಿ ಸ್ಥಳದಲ್ಲೇ ಮೃತಪಟ್ಟರು.

ತಾಲೂಕಿನ ಟಣಕನಕಲ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು,  ಮೃತ ಬಸಪ್ಪ ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ಹನುಮನಹಳ್ಳಿ ಗ್ರಾಮದ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಬಸಪ್ಪ ಕರಡಿ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next