Advertisement

ಪಡುಬಿದ್ರಿ: ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ

08:45 AM Aug 02, 2017 | Karthik A |

ಪಡುಬಿದ್ರಿ: ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿ ಪೇಟೆಯ ಬಳಿ ಮಂಗಳವಾರ ಬೆಳಗ್ಗೆ ಟೆಂಪೋ, ಬಸ್‌  ಹಾಗೂ ಲಾರಿಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಟೆಂಪೋ ಚಾಲಕ, ಪ್ರಕರಣದ ಆರೋಪಿ ಕಲಬುರಗಿ ಜಿಲ್ಲೆಯ ಯಾದಗಿರಿ ನಿವಾಸಿ ನಾಗರಾಜ (27) ಅವರಿಗೆ ಗಾಯಗಳಾಗಿದ್ದು ಮಂಗಳೂರಿನ ಸರಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಬೆಳಗ್ಗಿನ 7-30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಟೆಂಪೋ ಚಾಲಕನು ಯುಪಿಸಿಎಲ್‌ನಿಂದ ರಾತ್ರಿ ಪಾಳಿಯ ಕಾರ್ಮಿಕರನ್ನು ಅವರ ರೂಮಿಗೆ ತಂದು ಬಿಡುತ್ತಿದ್ದು ಈ ಘಟನೆಗೆ ನಿಮಿಷಗಳ ಮೊದಲಷ್ಟೇ ಆತ ಅವರೆಲ್ಲರನ್ನೂ ಇಳಿಸಿ ಮತ್ತೆ ಯುಪಿಸಿಎಲ್‌ಗೆ ತೆರಳುವ ಧಾವಂತದಲ್ಲಿ ತನ್ನ ವಾಹನವನ್ನು ತಿರುಗಿಸಿದ್ದರು. ಆ ವೇಳೆಗೆ ಕಾರ್ಕಳದ ಕಡೆಯಿಂದ ಪಡುಬಿದ್ರಿಯತ್ತ ಬರುತ್ತಿದ್ದ ಸರ್ವಿಸ್‌ ಬಸ್‌ಗೆ ಆತ ಢಿಕ್ಕಿ ಹೊಡೆದಿದ್ದು ಬಸ್‌ ಚಾಲಕನು ರಸ್ತೆಯ ಎಡಭಾಗಕ್ಕೆ ತಿರುಗಿಸಿದಾಗ ಲಾರಿಯೊಂದಕ್ಕೆ ಬಸ್‌ ಢಿಕ್ಕಿಯಾಗಿತ್ತು.

ರಾತ್ರಿ ವೇಳೆ ರಾಜ್ಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ ಲಾರಿ ಚಾಲಕ ಹಾಗೂ ಕ್ಲೀನರ್‌ ಮಲಗಿದ್ದರು. ಅವರಿಗೆ ಅಪಘಾತದ ರಭಸಕ್ಕೆ ಎಚ್ಚರವಾಗಿದೆ. ಢಿಕ್ಕಿಯಾದ ಬಸ್‌ನ ವೇಗಕ್ಕೆ ಲಾರಿ ಸುಮಾರು 10 ಅಡಿ ಹಿಂದಕ್ಕೆ ತಳ್ಳಲ್ಪಟ್ಟಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲೀ, ಲಾರಿಯಲ್ಲಿ ಮಲಗಿದ್ದವರಿಗಾಗಲೀ ಬಸ್ಸಿನಲ್ಲಿದ್ದವರಿಗಾಗಲೀ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಢಿಕ್ಕಿ ಹೊಡೆದ ವೇಳೆ ಟೆಂಪೋ ಚಾಲಕನು ತನ್ನ ವಾಹನದಿಂದ ಹೊರಗೆ ತಳ್ಳಲ್ಪಟ್ಟಿದ್ದು ರಸ್ತೆಗೆ ಬಿದಿದ್ದಾರೆ. ನಾಗರಾಜ ಅವರ ಬೆನ್ನು ಹುರಿ ಹಾಗೂ  ತಲೆಗೆ ಗಾಯಗಳಾಗಿವೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next