Advertisement

Bellary; ಸೆಂಟ್ರಲ್‌ ಜೈಲಿನಲ್ಲಿಂದು ದರ್ಶನ್ ಗೆ ಮಟನ್ ಊಟ

12:41 PM Aug 30, 2024 | Team Udayavani |

ಬಳ್ಳಾರಿ: ಬಳ್ಳಾರಿಯ ಸೆಂಟ್ರಲ್ ಜೈಲ್ ನಲ್ಲಿ ಬಂಧಿಯಾದ ದರ್ಶನ್ ಸೇರಿ 385 ಕೈದಿಗಳಿಗೂ ಇಂದು ಮಟನ್ ಊಟ ಸಿಗಲಿದೆ.

Advertisement

ಜೈಲು ನಿಯಮದ ಪ್ರಕಾರ ವಾರದಲ್ಲಿ ಒಂದು ದಿನ ನಾನ್ ವೆಜ್ ಊಟ ಕೈದಿಗಳಿಗೆ ನೀಡಲಾಗುತ್ತದೆ. ವಾರದಲ್ಲಿನ ಪ್ರತಿ ಶುಕ್ರವಾರ ಮಟನ್, ಚಿಕನ್ ಊಟ ನೀಡಲಾಗುತ್ತದೆ. ಒಂದು ವಾರ ಮಟನ್, ಒಂದು ವಾರ ಚಿಕನ್ ಊಟ ನೀಡಲಾಗುತ್ತದೆ. ಈ ವಾರ ಮಟನ್ ಊಟ ನೀಡಲಾಗುತ್ತಿದ್ದು, 40 ಕೆಜಿ ಮಟನ್ ಜೈಲಿನೊಳಗೆ ಒಯ್ಯಲಾಗಿದೆ. ಪ್ರತಿ ಕೈದಿಗೆ 115 ಗ್ರಾಂ. ಮಟನ್ ನೀಡಲಾಗುತ್ತಿದ್ದು, ರಾತ್ರಿ ಊಟಕ್ಕೆ ಮಟನ್ ಸಿದ್ದವಾಗುತ್ತಿದೆ.

ಪುಸ್ತಕ ಮೊರೆ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಇದೀಗ ಆಧ್ಯಾತ್ಮ ಪುಸ್ತಕಗಳ ಮೊರೆ ಹೋಗಿದ್ದಾರೆ. ಲಲಿತ ಸಹಸ್ರನಾಮ ಶ್ಲೋಕ ಪುಸ್ತಕ ಹಾಗೂ ಆಧ್ಯಾತ್ಮ ಪುಸ್ತಕ ಓದುತ್ತಿದ್ದಾರೆ. ಹೈ ಸೆಕ್ಯುರಿಟಿ ಸೆಲ್ ನಲ್ಲಿ ಒಂಟಿಯಾಗಿರುವ ನಟ ದರ್ಶನ್ ಬೇಸರ ಕಳೆಯಲು ದರ್ಶನ್ ಆಧ್ಯಾತ್ಮ ಪುಸ್ತಕಗಳ ಮೊರೆ ಹೋಗಿದ್ದಾರೆ. ಎರಡು ಪುಸ್ತಕಗಳನ್ನು ಬ್ಯಾಗ್ ನಲ್ಲಿ ತಂದಿದ್ದರು.

ಮುಂದುವರಿದ ಭದ್ರತೆ: ನಟ ದರ್ಶನ್ ಬಳ್ಳಾರಿ ಜೈಲ್ ಬಲ್ಲಿ ಬಂಧಿಯಾಗಿರುವ ಕಾರಣ ಸೆಂಟ್ರಲ್ ಜೈಲಿಗೆ ಬಿಗಿ ಭದ್ರತೆ ಇವತ್ತು ‌ಮುಂದುವರಿದಿದೆ. ಜೈಲ್ ಮುಂಭಾಗದಲ್ಲಿ ಹಾಗೂ ಒಳ ಭಾಗದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next