Advertisement

ರಸ್ತೆ ಅಪಘಾತ: ಇಬ್ಬರು ಸಂತ್ರಸ್ತ ಸಹೋದರಿಯರಿಗೆ 38 ಲಕ್ಷ ಪರಿಹಾರ

04:35 PM Aug 14, 2017 | udayavani editorial |

ಹೊಸದಿಲ್ಲಿ : ಮೋಟಾರು ವಾಹನ ಅಪಘಾತ ನ್ಯಾಯ ತೀರ್ಮಾನ ಮಂಡಳಿಯು 2007ರಲ್ಲಿ  ರಸ್ತೆ ಅಪಘಾತದಲ್ಲಿ ತಮ್ಮ 33 ವರ್ಷ ಪ್ರಾಯದ ತಾಯಿಯನ್ನು ಕಳೆದುಕೊಂಡ ಇಬ್ಬರು ಸಹೋದರಿಯರಿಗೆ 38 ಲಕ್ಷ ರೂ. ಪರಿಹಾರವನ್ನು ನೀಡಿದೆ.

Advertisement

ತಾಯಿಯ ಸಾವಿಗೆ ಪರಿಹಾರವಾಗಿ ನೀಡಲಾಗಿರುವ 27,75,000 ರೂ.ಗಳನ್ನು ಸಹೋದರಿಯರಿಬ್ಬರು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಜತೆಗೆ ಶೇ.70ರಷ್ಟು ಶಾಶತ್ವ ಅಂಗ ವೈಕಲ್ಯಕ್ಕೆ ಗುರಿಯಾಗಿರುವ ಒಬ್ಬ ಸಹೋದರಿಗೆ 10.20 ಲಕ್ಷ ರೂ.ಗಳ ಪರಿಹಾರವನ್ನು ನ್ಯಾಯ ಮಂಡಳಿ ಪ್ರಕಟಿಸಿದೆ. 

ಪರಿಹಾರ ಪಡೆದಿರುವ ಈ ಸಹೋದರಿಯರು ಮಧ್ಯ ದಿಲ್ಲಿಯ ಮಿಂಟೋ ರಸ್ತೆಯ ನಿವಾಸಿಗಳು.  

Advertisement

Udayavani is now on Telegram. Click here to join our channel and stay updated with the latest news.

Next