Advertisement

Bantwal ಕೋಳಿ ಅಂಕದ ಸ್ಥಳದಲ್ಲಿ ಅವಘಡ; ನಾಲ್ವರಿಗೆ ಗಾಯ

12:46 AM Nov 09, 2023 | Team Udayavani |

ಬಂಟ್ವಾಳ: ಕೋಳಿ ಅಂಕದ ಸ್ಥಳದಲ್ಲಿ ಸಂಭವಿಸಿದ ಅವಘಡದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಬುಧವಾರ ಕಲ್ಲಡ್ಕ ಸಮೀಪದ ಸುದೆಕ್ಕಾರಿನಲ್ಲಿ ನಡೆದಿದೆ.

Advertisement

ಅಂಕ ವೀಕ್ಷಣೆಗಾಗಿ ಹಾಕಿದ್ದ ಗ್ಯಾಲರಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಮಳೆಯ ಕಾರಣಕ್ಕೆ ಹಾಕಿದ್ದ ಶೀಟ್‌ ಬಿದ್ದು ಹಾನಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಂಕವು ಅನಧಿಕೃತವಾಗಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಯಾವ ಮಾಹಿತಿಯೂ ಖಚಿತಗೊಂಡಿಲ್ಲ. ಈ ಕುರಿತು ಪೊಲೀಸರಲ್ಲಿ ವಿಚಾರಿಸಿದಾಗ ಮಾಹಿತಿ ಇಲ್ಲ ಎಂದಿದ್ದಾರೆ.

ಘಟನೆಯಿಂದ ಕಡಬ ಭಾಗದ ವ್ಯಕ್ತಿಯ ಕಾಲಿಗೆ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಎನ್ನಲಾಗಿದೆ.ಉಳಿದಂತೆ ವಿವಿಧ ಭಾಗದ ಮೂವರಿಗೆ ಗಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next