Advertisement
* ಗುರುವಾರ ಬೆಳಗ್ಗೆ 6 ಗಂಟೆಯಿಂದ ಜನವರಿ 10ರ ರಾತ್ರಿ 12 ಗಂಟೆ ವರೆಗೆ ಬೆಂಗಳೂರು- ತುಮಕೂರು ರಸ್ತೆ ಗೊರಗುಂಟೆಪಾಳ್ಯದಿಂದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ ಹಾಗೂ ಯಶವಂತಪುರದಿಂದ ತುಮಕೂರು ಕಡೆಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹೊರತುಪಡಿಸಿ, ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
Related Articles
Advertisement
* ಕೆ.ಆರ್. ಪುರ ಕಡೆಯಿಂದ ರಿಂಗ್ ರಸ್ತೆಯಲ್ಲಿಬಂದು ತುಮಕೂರು ರಸ್ತೆ ತಲುಪುವ ವಾಹನಗಳು ಹೆಬ್ಟಾಳ ಮೇಲ್ಸೇತುವೆ ಕೆಳಭಾಗದಲ್ಲಿ ಬಲತಿರುವು ಪಡೆದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪಾಪುರ, ಕೊಡಿಗೇಹಳ್ಳಿ, ಬ್ಯಾಟರಾಯನಪುರ ಮಾರ್ಗವಾಗಿ ಬೈಪಾಸ್ ಜಂಕ್ಷನ್ ಹಾಗೂ ಯಲಹಂಕ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆ ಮಾರ್ಗವಾಗಿ ಸಿಂಗನಾಯಕನಹಳ್ಳಿ ಮೂಲಕ ರಾಜಾನುಕುಂಟೆಯಿಂದ ಎಡತಿರುವು ಪಡೆದು ದೊಡ್ಡಬೆಳವಂಗಲ ಮುಖ್ಯರಸ್ತೆಗೆ ಪ್ರವೇಶಿಸಿ ನೇರವಾಗಿ ದಾಬಸ್‌ಪೇಟೆ ಅಥವಾ ನೆಲಮಂಗಲ ಕಡೆಗೆ ಸಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವಾಸಿ ಭಾರತೀಯ ದಿವಸ್‌ಗೆ ನೋಟು ಅಮಾನ್ಯ “ಎಫೆಕ್ಟ್’
ಬೆಂಗಳೂರು: ರಾಜಧಾನಿಯಲ್ಲಿ ನಡೆಯಲಿ ರುವ ಮೂರು ದಿನಗಳ ಅಂತಾರಾಷ್ಟ್ರೀಯ ಪ್ರವಾಸಿ ದಿವಸ್ ಸಮ್ಮೇಳನಕ್ಕೂ ನೋಟು ಅಮಾನ್ಯ “ಎಫೆಕ್ಟ್’. ಹೌದು, ವಿಶ್ವಮಟ್ಟದ ಈ ಸಮ್ಮೇಳದಲ್ಲಿ ಭಾಗವಹಿಸುವ ವಿದೇಶಿ ಪ್ರತಿನಿಧಿಗಳಿಗೆ ಭಾರತದಲ್ಲಿ ನೋಟು ಅಮಾನ್ಯದ ಚಿಂತೆಯಾಗಿದ್ದು, ಇಲ್ಲಿ ಬಂದ ಮೇಲೆ ಸಮಸ್ಯೆಯಾಗಬಹುದೇ ಎಂಬ ಆತಂಕ ಕಾಡಿದೆ. ಸಮ್ಮೇಳನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರತಿನಿಧಿಗಳು ಆಗಮಿಸುವುದರಿಂದ ಸಹಜವಾಗಿ ಇಂತದ್ದೊಂದು ಆತಂಕ ಎದುರಾಗಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ಬಳಿಯೂ ಹಲವರು ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಪ್ರವಾಸಿ ದಿವಸ್ ಸಮ್ಮೇಳನದಲ್ಲಿ ಭಾಗವಹಿಸುವ ವಿದೇಶಿ ಗಣ್ಯರಿಗೆ ಕರೆನ್ಸಿ ಎಕ್ಸ್ ಚೇಂಜ್ ಮಾಡಿಕೊಡಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ವಿನಿಮಯ ಕೇಂದ್ರಗಳನ್ನು ತೆರೆದು ಅಗತ್ಯ ಪ್ರಮಾಣದ ನೋಟು ಲಭ್ಯ ಇರುವಂತೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಈ ಬಗ್ಗೆ ಖುದ್ದು ಆಸಕ್ತಿ ವಹಿಸಿ ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ಚರ್ಚಿಸಿ ವಿಶೇಷ ವಿನಿಯಮ ಕೇಂದ್ರದ ವ್ಯವಸ್ಥೆಗೆ ಅನುಮತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐದು ವಿಶೇಷ ಹೆಲಿಕಾಪ್ಟರ್‌ಗಳ ವ್ಯವಸ್ಥೆ
ಈ ಮಧ್ಯೆ, ಪ್ರವಾಸಿ ದಿವಸ್ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿದೇಶಾಂಗ ಸಚಿವರು, 12 ಮುಖ್ಯಮಂತ್ರಿಗಳು ಬರುವ ಹಿನ್ನೆಲೆಯಲ್ಲಿ ಐದು ವಿಶೇಷ ಹೆಲಿಕಾಪ್ಟರ್‌ಗಳನ್ನು ಸಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಮ್ಮೇಳನ ಸ್ಥಳಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿ ವಿದೇಶಿ ಗಣ್ಯರು ರಸ್ತೆ ಮೂಲಕ ಸಂಚರಿಸಿದರೆ ಸಂಚಾರ ದಟ್ಟಣೆ ಉಂಟಾಗುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.