Advertisement

ಜನಿವಾರಧಾರಿ ರಾಹುಲ್‌ರಿಂದ ಮಟನ್‌ ಸ್ವೀಕಾರ: BJP ಟೀಕೆ

08:57 PM Sep 03, 2023 | Team Udayavani |

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ನಿವಾಸದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸ್ವತಃ ಚಂಪರಣ್‌ ಮಟನ್‌ ತಯಾರಿಸಿ, ಎಲ್ಲರಿಗೂ ಬಡಿಸಿ, ತಾವು ಸೇವಿಸಿದ್ದಾರೆ. ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿ ಅಪ್‌ಲೋಡ್‌ ಮಾಡಿದ್ದರು. ಈ ವಿಡಿಯೋ ವೈರಲ್‌ ಆಗಿದೆ. ಆದರೆ ಇದನ್ನು ಬಿಜೆಪಿ ಟೀಕಿಸಿದೆ.

Advertisement

“ಶ್ರಾವಣ ಮಾಸದಲ್ಲಿ “ಜನಿವಾರಧಾರಿ ಬ್ರಾಹ್ಮಣ”ನಾಗಿರುವ ರಾಹುಲ್‌ ಗಾಂಧಿ ಮಟನ್‌ ತಯಾರಿಸಿ, ಅದನ್ನು ತಿಂದಿದ್ದಾರೆ. ಶ್ರಾವಣ ಮಾಸದಲ್ಲಿ ಹಿಂದೂಗಳು ಕಟ್ಟುನಿಟ್ಟಾಗಿ ಸಸ್ಯಹಾರವನ್ನು ಪಾಲಿಸುತ್ತಾರೆ. ಆದರೆ ಈ ಮಾಸದಲ್ಲಿ ಅವರು ಮಟನ್‌ ತಯಾರಿಸಿ, ತಿಂದಿರುವುದು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ’ ಎಂದು ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next