Advertisement

Women: ಬಹುಮತದ ಸರಕಾರ ಇದ್ದಿದ್ದಕ್ಕೆ ಮೀಸಲು ಅಂಗೀಕಾರ: ಮೋದಿ

12:38 AM Sep 23, 2023 | Team Udayavani |

ಹೊಸದಿಲ್ಲಿ: ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಈಗ ಅಂಗೀಕಾರ ದೊರೆಯಲು ಬಹುಮತದ ಸರಕಾರವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಸಂಸತ್‌ನಲ್ಲಿ ನಾರಿಶಕ್ತಿ ವಂದನ್‌ ಅಧಿನಿಯಮ ಮಸೂದೆಯು ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರನ್ನು ಸಮ್ಮಾನಿಸಲು ಬಿಜೆಪಿ ಮಹಿಳಾ ಮೋರ್ಚಾ ಶುಕ್ರವಾರ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

ಮಹಿಳಾ ಮೀಸಲಾತಿಯು ಸಾಮಾನ್ಯ ಮಸೂದೆಯಲ್ಲ, ಅದು ಭಾರತದ ಹೊಸ ಪ್ರಜಾ ಸತ್ತಾತ್ಮಕ ಬದ್ಧತೆಯ ಪ್ರತೀಕ. ಇಂಥದ್ದೊಂದು ಇತಿ ಹಾಸ ಬರೆಯುವ ಅವಕಾಶವನ್ನು ಕೋಟ್ಯಂತರ ಭಾರತೀಯರು ನಮಗೆ ಕೊಟ್ಟಿರುವುದು ನಮ್ಮ ಅದೃಷ್ಟ. ಕೆಲವೊಂದು ನಿರ್ಧಾರಗಳು ದೇಶದ ಭವಿಷ್ಯವನ್ನೇ ಬದಲಿಸುತ್ತವೆ. ಅಂತಹ ನಿರ್ಧಾರ ಗಳಲ್ಲಿ ಇದೂ ಒಂದು. ಸುಮಾರು 3 ದಶಕಗಳ ಕಾಲ ನಾವು ಈ ಮಸೂದೆಯ ಬಗ್ಗೆ ಚರ್ಚಿಸುತ್ತಲೇ ಬಂದಿದ್ದೇವೆ. ಆದರೆ ಅದು ಅಂಗೀಕಾರಗೊಂಡಿ ರಲಿಲ್ಲ. ಬಹುಮತದ ಸರಕಾರದಿಂದಾಗಿ ಈಗ ಇದು ಸಾಧ್ಯವಾಗಿದೆ. ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕೆಂದರೆ ಬಹುಮತ ಸರಕಾರ ಎಷ್ಟು ಮುಖ್ಯ ಎಂಬುದು ಇದರಿಂದ ಸಾಬೀತಾಗಿದೆ ಎಂದು ಮೋದಿ ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದಿದ್ದು, “ಬಹುಮತದ ಸರಕಾರವನ್ನೇ ಆಯ್ಕೆ ಮಾಡಿ’ ಎಂಬ ಪರೋಕ್ಷ ಸಂದೇಶವನ್ನು ಅವರು ಈ ಮೂಲಕ ದೇಶವಾಸಿಗಳಿಗೆ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಜಾತಿಗಣತಿಯಿಂದ ಗಮನ ಬೇರೆಡೆ ಸೆಳೆಯುವ ಯತ್ನ
ಮಹಿಳಾ ಮೀಸಲಾತಿ ಮಸೂದೆಯನ್ನು ಶ್ಲಾಘಿಸಿ, ಸ್ವಾಗತಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಅದನ್ನು ತತ್‌ಕ್ಷಣವೇ ಜಾರಿ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಹಿಳಾ ಮೀಸಲಾತಿಯು ಒಳ್ಳೆಯ ನಿರ್ಧಾರ. ಆದರೆ ನಾವಿಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು. ಮಸೂದೆ ಜಾರಿಗೂ ಮುನ್ನ ಗಣತಿ ನಡೆಯಬೇಕು ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ ಆಗಬೇಕು ಎಂದು ಸರಕಾರ ಹೇಳುತ್ತಿದೆ. ಹೀಗಾಗಿ ಈ ಮಸೂದೆ ನಿಜಕ್ಕೂ ಜಾರಿಯಾಗುತ್ತದಾ ಎಂಬ ಪ್ರಶ್ನೆ ಮೂಡುತ್ತಿದೆ. ಮನಸ್ಸು ಮಾಡಿದರೆ ಈಗಲೇ ಇದನ್ನು ಜಾರಿ ಮಾಡಬಹುದು. ಆದರೆ ಸರಕಾರಕ್ಕೆ ಅದನ್ನು ಮಾಡುವ ಮನಸ್ಸಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ಜಾತಿ ಗಣತಿ ಮಾಡಬೇಕು ಎಂಬ ಕೂಗಿನಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರಕಾರ ಈ ತಂತ್ರವನ್ನು ಅನುಸರಿಸಿದೆ ಎಂದೂ ದೂರಿದ್ದಾರೆ.

Advertisement

ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನವನ್ನು ಮುಂದೂಡಿಕೆ ಮಾಡಲು ಕೇಂದ್ರ ಸರಕಾರವು ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಜನಗಣತಿಯನ್ನು “ನೆಪ’ವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಅನುಷ್ಠಾನ ಮಾಡದೇ, ಚುನಾವಣ ವಸ್ತುವಾಗಿ ಬಳಸುವುದೇ ಅವರ ಉದ್ದೇಶ.
ಜೈರಾಂ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

 

Advertisement

Udayavani is now on Telegram. Click here to join our channel and stay updated with the latest news.

Next