Advertisement

ನಾಗರಾಜ ಅಧಿಕಾರ ಸ್ವೀಕಾರ

12:56 PM Aug 03, 2017 | |

ಹುಬ್ಬಳ್ಳಿ: ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾವಹಿಸಿ ಮಟ್ಟಹಾಕಲಾಗುವುದು ಹಾಗೂ ಮಟ್ಕಾ, ಜೂಜಾಟ, ಬೆಟ್ಟಿಂಗ್‌ ದಂಧೆಗಳ ಮೇಲೆ ಕಡಿವಾಣ ಹಾಕಲಾಗುವುದು.  ಇವನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್‌ ಕಮೀಷನರೇಟ್‌ನ ನೂತನ ಆಯುಕ್ತ ಎಂ.ಎನ್‌. ನಾಗರಾಜ ಖಡಕ್‌ ಸಂದೇಶ ನೀಡಿದ್ದಾರೆ. 

Advertisement

ಬುಧವಾರ ಸಂಜೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೇಣುಕಾ ಸುಕುಮಾರ ಅವರಿಂದ ಅಧಿಕಾರ  ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಜನರನ್ನು ಹೆದರಿಸಿ ದರೋಡೆ ಮಾಡುವ ದುಷ್ಕರ್ಮಿಗಳ ತಂಡವನ್ನು ಪತ್ತೆ ಮಾಡಲು ಡಿಸಿಪಿ  ನೇಮಗೌಡ ನೇತೃತ್ವದಲ್ಲಿ ತಂಡ ರಚಿಸಿ ತಡೆಗಟ್ಟಲಾಗುವುದು.

ದುಷ್ಕೃತದಂತಹ ಘಟನೆಗಳು ಹಾಗೂ ಕಳ್ಳತನ, ಸರಗಳ್ಳತನ ಪ್ರಕರಣಗಳು ನಡೆಯದಂತೆ  ನಿಯಂತ್ರಿಸಲಾಗುವುದು ಹಾಗೂ ಅವನ್ನು ಪತ್ತೆ ಮಾಡಲಾಗುವುದು. ಅದಕ್ಕೆ ಮಾಧ್ಯಮಗಳ ಹಾಗೂ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು. ನ್ಯಾಯಕೋರಿ ಠಾಣೆಗಳಿಗೆ  ಬರುವ ಕಟ್ಟಕಡೆಯ ಪ್ರಜೆಗೂ ಸಹ ನ್ಯಾಯ ಒದಗಿಸಲಾಗುವುದು.

ಅವರಿಗೆ ಅವಶ್ಯವಾದ ಎಲ್ಲ ಸಹಕಾರ ನೀಡಲಾಗುವುದು. ಠಾಣೆಗೆ ಬಂದವರಿಗೆ ಗೌರವ ಸಿಗಬೇಕು. ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಕಾರ್ಯನಿರ್ವಹಿಸಲಾಗುವುದು. ಹಿಂದಿನ ಆಯುಕ್ತ ಪಿ.ಎಚ್‌. ರಾಣೆ ಅವರು ಕೈಗೊಂಡ ಉತ್ತಮ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು. ಈ ಸಂದರ್ಭದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್‌. ನೇಮಗೌಡ, ಎಸಿಪಿ ಎನ್‌.ಬಿ. ಸಕ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next