Advertisement

ಪಿಡಿಒ, ಅಧ್ಯಕ್ಷರಿಂದ ಲಂಚ ಸ್ವೀಕಾರ: ಆರೋಪ

04:05 PM Aug 02, 2022 | Team Udayavani |

ಕನಕಪುರ: ಹಳ್ಳಿಮಾರನಹಳ್ಳಿ ಗ್ರಾಪಂ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದ್ದು, ಅಧಿಕಾರಿಗಳು ಲಂಚ ಪಡೆಯುತ್ತಿರುವ ವಿಡಿಯೋ ಒಂದೆಡೆಯಾದರೆ,ಮತ್ತೂಂದೆಡೆ ಅಧ್ಯಕ್ಷರು ತಮ್ಮ ನೌಕಕರಿಂದಲೇ ಲಂಚಕ್ಕೆ ಬೇಡಿಕೆ ಇಡುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ತಾಲೂಕಿನ ಕಸಬಾ ಹೊಳಬಳಿಯ ಹಳ್ಳಿಮಾರನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಪ್ಪ ರೇಣಿ ಕನಕಪುರದಲ್ಲಿರುವ ತಮ್ಮ ನಿವಾಸದಲ್ಲಿ ಗ್ರಾಮಸ್ಥರೊಬ್ಬರ ಬಳಿ ಇ ಖಾತೆ ವಿಚಾರಕ್ಕೆ 5 ಸಾವಿರ ರೂ. ಲಂಚ ಪಡೆಯುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಧ್ಯಕ್ಷರು ಸಹ ಇದರಿಂದ ಹೊರತಾಗಿಲ್ಲ. ಅಧ್ಯಕ್ಷೆ ಸಂಧ್ಯಾರಾಣಿ ನೀರು ಗಂಟಿಗಳ ವೇತನದಲ್ಲಿ ಪ್ರತಿ ತಿಂಗಳು 1,500 ಲಂಚ ಕೊಡುವಂತೆ ಬೇಡಿಕೆ ಇಟ್ಟಿರುವ ಆಡಿಯೋಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿವೃದ್ಧಿ ಅಧಿಕಾರಿ ಹನುಮಪ್ಪ ರೇಣಿ ಲಂಚ ಪಡೆಯುತ್ತಿರುವ ವಿಡಿಯೋ, ಅಧ್ಯಕ್ಷೆ ಸಂಧ್ಯಾರಾಣಿನೀರು ಗಂಟಿಗಳ ವೇತನದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಸಂಭಾಷಣೆ ರಾಷ್ಟ್ರ ಸಮಿತಿ ಪಕ್ಷದ ಫೇಸ್‌ಬುಕ್‌ ಪೇಜ್‌ನಲ್ಲಿ ಹರಿಬಿಟ್ಟಿದ್ದು,ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

1,500 ಕೊಡುವಂತೆ ರೂ. ಬೇಡಿಕೆ: ಹಳ್ಳಿಮಾರನಹಳ್ಳಿ ಗ್ರಾಮದ ಕಬ್ಟಾಳಯ್ಯ ಎಂಬುವವರಿಗೆ ಈ ಸ್ವತ್ತು ಮಾಡಿಕೊಡಲು ಪಿಡಿಒ ಹನುಮಪ್ಪ ರೇಣಿ 9 ಸಾವಿರ ಲಂಚಕ್ಕೆ ಬೇಡಿಕೆಇಟ್ಟಿದ್ದಾರೆ. ಕಬ್ಟಾಳಯ್ಯ ಮುಂಗಡವಾಗಿ 5 ಸಾವಿರ ರೂ. ಲಂಚದ ಹಣ ನೀಡುವಾಗ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಲಾಗಿದೆ. ಮತ್ತೂಂದೆಡೆ,ಇತ್ತೀಚಿಗೆ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಸಂಧ್ಯಾರಾಣಿ ನೀರುಗಂಟಿಗಳ ವೇತನದಲ್ಲಿ ಪ್ರತಿತಿಂಗಳು 1,500 ಕೊಡುವಂತೆ ಬೇಡಿಕೆ ಇಟ್ಟಿರುವಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶಿಸ್ತು ಕ್ರಮಕ್ಕೆ ಆಗ್ರಹ: ಹಳ್ಳಿಮಾರನಹಳ್ಳಿ ಅಭಿವೃದ್ಧಿ ಅಧಿಕಾರಿ ಹನುಮಪ್ಪ ರೇಣಿ ಮೇಲೆ ಅನೇಕಆರೋಪಗಳಿವೆ. ಸರಿಯಾಗಿ ಕಚೇರಿಗೆ ಬರೋದಿಲ್ಲ.ಜನರು ಕೆಲಸ ಕಾರ್ಯಗಳಿಗೆ ಅಲೆದಾಡಬೇಕು.ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿರುವುದು ಸೇರಿದಂತೆ ಹಲವು ಆರೋಪಗಳಿವೆ. ಇದರ ಬೆನ್ನಲ್ಲೇ ಇ-ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿರುವುದು ಎಲ್ಲ ಆರೋಪಗಳಿಗೆ ಪುಷ್ಟಿನೀಡುವಂತೆ ಮಾಡಿದೆ. ಈ ಪ್ರಕರಣವನ್ನು ಸೂಕ್ತತನಿಖೆ ನಡೆಸಿ ಲಂಚ ಪಡೆಯುತ್ತಿರುವ ಅಧಿಕಾರಿಗಳುಮತ್ತು ಅಧ್ಯಕ್ಷರ ವಿರುದ್ದವೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next