ಕೊಲಂಬೊ: ನಾಲ್ಕು ವರ್ಷಗಳ ಬಳಿಕ ಎಸಿಸಿ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಗುರುವಾರ ಕೊಲಂಬೊದಲ್ಲಿ ಆರಂಭವಾಗಲಿದೆ. ಇದು 5ನೇ ಆವೃತ್ತಿಯ ಪಂದ್ಯಾವಳಿ.ಇದರಲ್ಲಿ 8 “ಎ’ ತಂಡಗಳು ಪಾಲ್ಗೊಳ್ಳುತ್ತಿವೆ. ಭಾರತ ಎ ತಂಡ “ಬಿ’ ವಿಭಾಗದಲ್ಲಿದೆ. ಇಲ್ಲಿನ ಇತರ ತಂಡಗಳೆಂದರೆ ಪಾಕಿಸ್ತಾನ ಎ, ನೇಪಾಳ ಎ ಮತ್ತು ಯುಎಇ ಎ.
“ಎ’ ವಿಭಾಗದಲ್ಲಿರುವ ತಂಡಗಳೆಂದರೆ ಅಫ್ಘಾನಿಸ್ತಾನ ಎ, ಬಾಂಗ್ಲಾದೇಶ ಎ, ಒಮಾನ್ ಎ ಮತ್ತು ಶ್ರೀಲಂಕಾ ಎ.
ಯಶ್ ಧುಲ್ ನಾಯಕತ್ವದ ಭಾರತ “ಎ’ ತನ್ನ ಮೊದಲ ಪಂದ್ಯವನ್ನು ಜು. 14ರಂದು ಯುಎಇ ಎ ವಿರುದ್ಧ ಆಡಲಿದೆ. ಬಳಿಕ ನೇಪಾಲ ಎ (ಜು. 17) ಮತ್ತು ಪಾಕಿಸ್ಥಾನ ಎ (ಜು. 19) ತಂಡವನ್ನು ಎದುರಿಸಲಿದೆ.
ಇದುವರೆಗೆ ಶ್ರೀಲಂಕಾ 2 ಸಲ, ಭಾರತ ಮತ್ತು ಪಾಕಿಸ್ತಾನ ಒಮ್ಮೆ ಚಾಂಪಿಯನ್ ಆಗಿವೆ. ಭಾರತ 2013ರ ಆರಂಭಿಕ ಆವೃತ್ತಿಯಲ್ಲಿ ಟ್ರೋಫಿ ಎತ್ತಿತ್ತು. ಶ್ರೀಲಂಕಾ 2017 ಮತ್ತು 2018ರಲ್ಲಿ ಸತತ 2 ಸಲ ಪ್ರಶಸ್ತಿ ಜಯಿಸಿತ್ತು.
ಭಾರತ “ಎ’ ತಂಡ: ಯಶ್ ಧುಲ್ (ನಾಯಕ), ಅಭಿಷೇಕ್ ಶರ್ಮ, ನಿಕಿನ್ ಜೋಸ್, ಪ್ರದೋಷ್ ರಂಜನ್ ಪಾಲ್, ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರಾನ್ ಸಿಂಗ್, ಧ್ರುವ ಜುರೆಲ್, ಮಾನವ್ ಸುತಾರ್, ಯುವರಾಜ್ ಸಿಂಗ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೆಕರ್.