Advertisement

ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ

08:08 PM May 06, 2022 | Team Udayavani |

ಮಂಡ್ಯ: ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ದಾಳಿ ನಡೆಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಡ್ಯ ಜಿಲ್ಲಾ ಪರಿಸರ ಅಧಿಕಾರಿಯೊಬ್ಬರು ಬಲೆಗೆ ಬಿದ್ದಿದ್ದಾರೆ.

Advertisement

ಪರಿಸರ ಅಧಿಕಾರಿ ಹೇಮಲತಾ ಎಸಿಬಿ ಬಲೆಗೆ ಬಿದ್ದಿರುವ ಮಹಿಳಾ ಅಧಿಕಾರಿಯಾಗಿದ್ದಾರೆ. ಇವರು ಹಲಗೂರಿನ ಶಶಿಕಾಂತ್ ಎಂಬುವರು ಪೆಟ್ರೋಲ್ ಬಂಕ್ ತೆರೆಯಲು ಪರಿಸರ ನಿರಾಪೇಕ್ಷಣಾ ಪತ್ರ ಕೊಡಲು 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಅದರಂತೆ ಶುಕ್ರವಾರ ಮುಂಗಡವಾಗಿ 15 ಸಾವಿರ ರೂ. ನೀಡಲು ಕಚೇರಿಗೆ ಶಶಿಕಾಂತ್ ಆಗಮಿಸಿದ್ದರು. ಅದಕ್ಕೂ ಮೊದಲೇ ಶಶಿಕಾಂತ್ ಪರಿಸರ ಅಧಿಕಾರಿ ಹೇಮಲತಾ ವಿರುದ್ಧ ಎಸಿಬಿಗೆ ದೂರು ನೀಡಿದ್ದರು. ಅದರಂತೆ ಎಸಿಬಿ ಅಧಿಕಾರಿಗಳು ಹೆಣೆದ ಬಲೆಗೆ ಮಹಿಳಾ ಅಧಿಕಾರಿ ಹೇಮಲತಾ ಬಿದ್ದಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ ೧೫ ಸಾವಿರ ರೂ. ಲಂಚ ಸ್ವೀಕರಿಸುವಾಗ ಮೈಸೂರಿನ ಎಸಿಬಿ ಎಸ್ಪಿ ಎ.ಜೆ.ಸುಜಿತ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧರ್ಮೇಂದ್ರ ಅವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದು,ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ. ದಾಳಿಯಲ್ಲಿ ಇನ್ಸ್ಪೆಕ್ಟರ್ ಪುರುಷೋತ್ತಮ್, ವಿನೋದ್‌ರಾಜ್, ಸಿಬ್ಬಂದಿಗಳಾದ ಪಾಪಣ್ಣ, ಮಹದೇವು, ಕುಮಾರ್, ವೆಂಕಟೇಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next