ಧಾರವಾಡ: ಕಚೇರಿಯಲ್ಲಿ ಮಾಡಿದ ಕೆಲಸಕ್ಕೆ ದೇವಸ್ಥಾನದ ಆವರಣದಲ್ಲಿ ಲಂಚ ಪಡೆಯುತ್ತಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದ್ವಿತೀಯ ದರ್ಜೆ ಸಹಾಯಕನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ.
ನಿವೇಶನದ ಉತಾರ ಮಾಡಿಕೊಡಲು 15 ಸಾವಿರ ರೂ.ಗಳ ಲಂಚ ಕೇಳಿದ್ದ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಸುರೇಶ ಗೊಲ್ಲರ ಗುರುವಾರ ಇಲ್ಲಿನ ಸಮೀಪದ ಸಾಯಿಬಾಬಾ ಮಂದಿರದಲ್ಲಿ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿ ಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.
ವೀರಭದ್ರಪ್ಪ ನಾವಲಗಿ ಎಂಬುವವರು ಕೆಲಗೇರಿಯಲ್ಲಿ ತಮಗೆ ಸೇರಿದ 8 ಗುಂಟೆ ನಿವೇಶನಕ್ಕೆ ಸಂಬಂಧಿಸಿದಂತೆ ಉತಾರ ಮಾಡಿ ಕೊಡಲು 2016ರ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಕೇವಲ 5 ಗುಂಟೆಯ ಜಾಗಕ್ಕೆ ಉತಾರ ನೀಡಿದ್ದ ಪಾಲಿಕೆ ಅ ಧಿಕಾರಿಗಳು, ಉಳಿದ 3 ಗುಂಟೆಯನ್ನು ಹಾಗೇ ಬಿಟ್ಟಿದ್ದರು.
ಅದನ್ನೂಮತ್ತೆ ಮರಳಿ ಉತಾರಲ್ಲಿ ದಾಖಲಿಸುವಂತೆ ಕೋರಿ ಮೂರು ತಿಂಗಳ ಹಿಂದೆ ವೀರಭದ್ರಪ್ಪ ಮತ್ತೂಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಸಿದಾಗಿನಿಂದ ಅನೇಕ ಬಾರಿ ತಮ್ಮ ಕೆಲಸ ಮಾಡಿಕೊಡುವಂತೆ ಕೇಳಿಕೊಂಡರೂ ವೀರಭದ್ರಪ್ಪ ಅವರನ್ನು ಈತ ಇನ್ನೂ ಕೆಲಸವಾಗಿಲ್ಲ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹೇಳಿ ಸತಾಯಿಸುತ್ತಿದ್ದ.
ಕೊನೆಗೆ ಈ ಕೆಲಸಕ್ಕೆ ಸುರೇಶ ಗೊಲ್ಲರ 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟ. ಲಂಚದ ಬೇಡಿಕೆ ಇಡುತ್ತಿದ್ದಂತೆ ವೀರಭದ್ರಪ್ಪ ಒಂದು ವಾರದ ಹಿಂದೆ ಎಸಿಬಿ ಅ ಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದರು. ಕೊನೆಗೆ ಇಲ್ಲಿನ ಕೆಲಗೇರಿ ಸಾಯಿಬಾಬಾ ಗುಡಿಯ ಬಳಿ ಗುರುವಾರ ಬೆಳಿಗ್ಗೆ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ,
ಸುರೇಶನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಇನ್‌ಸ್ಪೆಕ್ಟರ್ ಪ್ರಮೋದ ಯಲಿಗಾರ ತಿಳಿಸಿದ್ದಾರೆ. ನಂತರ ಬಾರಾಕೋಟ್ರಿ ಬಳಿ ಇರುವ ಪಾಲಿಕೆ ವಲಯ ಕಚೇರಿ1ಕ್ಕೆ ತೆರಳಿದ ಡಿಎಸ್‌ಪಿ ಜೆ.ರಘು ನೇತೃತ್ವದ ತಂಡ,ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಎದುರಿಗೆ ಇದ್ದ ಕಡತಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ಹುಡುಕಾಡಿದಂತೆ ಮಾಡಿ ಸುರೇಶ ಸತಾಯಿಸಿದ. ನಂತರ ಎಸಿಬಿ ಅಧಿಕಾರಿಗಳೇ ಹುಡುಕಿ ತೆಗೆದರು. ದಾಳಿ ವೇಳೆ ತನಿಖಾ ಧಿಕಾರಿ ಬಿ.ಎ.ಜಾಧವ, ಜಯಾ ಕಟ್ಟಿ, ಗಿರೀಶ ಮನಸೂರು, ಲೋಕೇಶ ಬೆಂಡಿಕಾಯಿ, ಎಸ್.ಎಸ್. ಕಾಜಗಾರ ತಂಡದಲ್ಲಿದ್ದರು.