Advertisement

ಲಂಚ ಸ್ವೀಕರಿಸುತ್ತಿದ್ದ ಕಲಬುರಗಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಲಕ್ಕಪ್ಪ ಎಸಿಬಿ ಬಲೆಗೆ

06:31 PM Oct 06, 2020 | sudhir |

ಕಲಬುರಗಿ: ಹೊಸ ಕಾಲೇಜು ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಕಲಬುರಗಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ಇ.ಲಕ್ಕಪ್ಪ‌ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

Advertisement

ನಗರದ ಸಿಐಬಿ ಕಾಲೋನಿಯ ನಾಗರಾಜ ಗಿರಿ ಎಂಬುವವರು ಹೊಸದಾಗಿ ಪಿಯುಸಿ ಕಾಲೇಜು ಆರಂಭಿಸುತ್ತಿದ್ದು‌, ಅಗ್ನಿಶಾಮಕ ಇಲಾಖೆಯಿಂದ ನಿರಾಪೇಷಣಾ ಪತ್ರ (ಎನ್ಒಸಿ) ಪಡೆಯಲು ಅರ್ಜಿ ಸಲ್ಲಿಸಿದ್ದರು.

ಎನ್ಒಸಿ ನೀಡಲು ಎಸ್.ಇ.ಲಕ್ಕಪ್ಪ‌ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮಧ್ಯಾಹ್ನ 2 ಗಂಟೆಗೆ ಅಗ್ನಿಶಾಮಕ ಕಚೇರಿಯಲ್ಲೇ ನಾಗರಾಜ ಅವರಿಂದ‌ 75 ಸಾವಿರ ರೂ.‌‌‌ ಲಂಚದ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ‌‌ ಲಕ್ಕಪ್ಪ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ.

ಇದನ್ನೂ ಓದಿ :ಇನ್ಮುಂದೆ ಬರಲಿದೆ ಗೂಗಲ್ ಪೇಪರ್ ಫೋನ್ : ಇದು ಜಗತ್ತೆ ನಿಬ್ಬೆರಗಾಗಿಸುವ ಹೊಸ ಅವಿಷ್ಕಾರ

ಎಸಿಬಿ ಎಸ್.ಪಿ. ಮಹೇಶ್ ಮೇಘಣ್ಣವರ್, ಡಿ.ಎಸ್.ಪಿ. ವೀರೇಶ ಕರಡಿಗುಡ್ಡ, ಇನ್ಸ್ ಪೆಕ್ಟರ್ ಗಳಾದ ಎಂಡಿ ಇಸ್ಮಾಯಿಲ್,‌ ರಾಘವೇಂದ್ರ ಭಜಂತ್ರಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಆರ್.ಎಫ್.ಓ. ಲಕ್ಕಪ್ಪರನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next