Advertisement

ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ

08:15 PM Jul 21, 2021 | Team Udayavani |

ಯಾದಗಿರಿ: ಜಿಲ್ಲೆಯ ಹುಣಸಗಿ ಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಭೂಮಾಪಕ ನ ಲಂಚಾವತಾರ ಬಯಲು ಮಾಡಿದ್ದಾರೆ.

Advertisement

ಪಟ್ಟಣದ ಕಕ್ಕೇರಿ ಕ್ರಾಸ್ ಹತ್ತಿರ ರೋಡಿನಲ್ಲಿ ಸರ್ವೇಯರ್ ರವಿಕುಮಾರ್ ಬನಹಟ್ಟಿಯ ಮಹಾದೇವಪ್ಪ ಬಾಗನಗೌಡ ಬಡಿಗೇರ್ ಇವರ ಹೊಲ ಸರ್ವೆ ನಂಬರ್.53 ನೇದ್ದರ 12 ಎಕರೆ ಭೂಮಿಯಲ್ಲಿ 4 ಎಕರೆ 30 ಗುಂಟೆ ಪ್ರತ್ಯೇಕ ಮಾಡಿ ಸರ್ವೆ ಮಾಡುವ ವಿಷಯದಲ್ಲಿ 2,50,000/- ರೂ ಲಂಚದ ಹಣ ಪಡೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ.

ಕಲಬುರಗಿ ಎಸಿಬಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣವರ್ ಮತ್ತು ಯಾದಗಿರಿ ಡಿ ವೈಎಸ್ಪಿ ಉಮಾ ಶಂಕರ್, ಪಿಐ ಬಾಬಾಸಾಬ ಪಟೇಲ್, ಗುರುಪಾದ ಬಿರಾದಾರ್ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : BSY ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ : ಸುಬ್ರಮಣಿಯನ್‌ ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next