Advertisement

ರಾಜ್ಯಾದ್ಯಂತ ಎಸಿಬಿ ದಾಳಿ: 9 ಅಧಿಕಾರಿಗಳಿಂದ ದಾಖಲೆ ವಶ

10:35 PM Jul 15, 2021 | Team Udayavani |

ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಗುರುವಾರ ರಾಜ್ಯದ 9 ಸರಕಾರಿ ಅಧಿಕಾರಿಗಳಿಗೆ ಸೇರಿದ 43 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

Advertisement

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ರಧಾನ ಎಂಜಿನಿಯರ್‌ ಆರ್‌.ಪಿ.ಕುಲಕರ್ಣಿ ಅವರಿಂದ ಬೆಂಗಳೂರಿನಲ್ಲಿ 1 ವಾಸದ ಮನೆ, 4 ಫ್ಲ್ಯಾಟ್‌ಗಳು, ವಿವಿಧೆಡೆ 3 ನಿವೇಶನಗಳು, 2 ಕಾರು, 1 ದ್ವಿಚಕ್ರ ವಾಹನ,  ಆಭ‌ರಣ, ನಗದು, ವಿವಿಧ ಬ್ಯಾಂಕ್‌ ಖಾತೆಗಳ ಠೇವಣಿಗಳು ಇತ್ಯಾದಿಗಳು ಸಿಕ್ಕಿವೆ.

ಕೋರಮಂಗಲದ ಆರ್‌ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಎ.ಕೃಷ್ಣಮೂರ್ತಿ ಅವರಿಂದ ಬೆಂಗಳೂರು ನಗರ ಹಾಗೂ ದೊಮ್ಮಲೂರಿನಲ್ಲಿ  ಎರಡು ಮನೆ, ಒಂದು ಶಾಲಾ ಕಟ್ಟಡ, ತುಮಕೂರು ಜಿಲ್ಲೆ, ಕೊರಟಗೆರೆಯಲ್ಲಿನ 1 ಫಾರ್ಮ್ ಹೌಸ್‌,  ವಿವಿಧೆಡೆ ಒಟ್ಟು 30 ನಿವೇಶನಗಳು,  ಆಭರಣ,  82 ಎಕರೆ ಕೃಷಿ ಜಮೀನು, 4 ದ್ವಿಚಕ್ರ ವಾಹನಗಳು, 3 ಕಾರುಗಳು, 1 ಟೆಂಪೋ ಮ್ಯಾಕ್ಸ್‌ ಕ್ಯಾಬ್‌    ಪತ್ತೆಯಾಗಿವೆ.

ಬಸವಕಲ್ಯಾಣದ ಉಪವಿಭಾಗದ ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ವಿಭಾಗ ಕಿರಿಯ ಎಂಜಿನಿಯರ್‌ ಸುರೇಶ್‌ ಅವರಿಂದ  1  ಮನೆ, ಭಾಲ್ಕಿಯಲ್ಲಿ 1 ಪೆಟ್ರೋಲ್‌ ಬಂಕ್‌,  4 ನಿವೇಶನಗಳು,  ನಿರಖು ಠೇವಣಿ ಪತ್ರಗಳು ಪತ್ತೆಯಾಗಿವೆ.

ಮಂಡ್ಯ ಜಿಲ್ಲೆ ಸಾಮಾಜಿಕ ಅರಣ್ಯ, ಅರಣ್ಯ ಉಪ ಸಂರಕ್ಷಣಾಧಿಕಾರಿ ಟಿ.ವೆಂಕಟೇಶ್‌ ಅವರಿಂದ  ಮೈಸೂರಿನಲ್ಲಿರುವ 2   ಮನೆ,  9 ನಿವೇಶನಗಳು, 12 ಎಕರೆ ಕೃಷಿ ಜಮೀನು ಸಿಕ್ಕಿವೆ.

Advertisement

ಕೋಲಾರ  ಜಿಲ್ಲೆಯ ಮಾಲೂರು ತಾಲೂಕಿನ ಮಾಲೂರು ಟೌನ್‌ ಪ್ಲ್ರಾನಿಂಗ್‌ ಅಥಾರಿಟಿ ಸಹಾಯಕ ನಿರ್ದೇಶಕ ಎಚ್‌. ಆರ್‌.ಕೃಷ್ಣಮೂರ್ತಿ ಅವರಿಂದ  ಒಟ್ಟು 3  ಮನೆಗಳು, ವಿವಿಧ  ನಗರಗಳಲ್ಲಿ  4 ನಿವೇಶನಗಳು, ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು ಮುಂತಾದವು ಪತ್ತೆಯಾಗಿವೆ.

ವಿಜಯಪುರ ಕೆಪಿಟಿಸಿಎಲ್‌ನ ಪ್ರಭಾಪಿ ಇ.ಇ.ಸಿದ್ದರಾಮ ಮಲ್ಲಿಕಾರ್ಜುನ ಬಿರಾದರ್‌ ಅವರಿಂದ  3  ಮನೆಗಳು,  4 ನಿವೇಶನ,  35 ಎಕರೆ ಕೃಷಿ ಜಮೀನು ಮುಂತಾದವು ಸಿಕ್ಕಿವೆ.

ಬಳ್ಳಾರಿ ಜೆಸ್ಕಾಂ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ಎ.ಎನ್‌. ವಿಜಯ ಕುಮಾರ್‌ ಅವರಿಂದ 2 ಮನೆಗಳು,  8 ನಿವೇಶನಗಳು, 1 ದ್ವಿಚಕ್ರ ವಾಹನ, 2 ಕಾರುಗಳು, ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಜತೆಗೆ ಕೆಲ ದಾಖಲೆಗಳು ಸಿಕ್ಕಿದೆ.

ಜತೆಗೆ  ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಜಿ.ಶ್ರೀಧರ್‌ ಹಾಗೂ ಉಡುಪಿಯ ಕೆಆರ್‌ಐಡಿಎಲ್‌ನ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣ ಎಸ್‌.ಹೆಬ್ಬೂರು ನಿವಾಸದ ಮೇಲೂ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next