Advertisement

ರಾಜ್ಯಾದ್ಯಂತ ಭ್ರಷ್ಟ  ಕುಳಗಳಿಗೆ ಎ.ಸಿ.ಬಿ. ಶಾಕ್‌

05:52 AM Mar 19, 2019 | Karthik A |

ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟ ಆಧಿಕಾರಿಗಳ ನಿವಾಸಗಳ ಮೇಲೆ ಇಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಕೋಟಿಗಟ್ಟಲೆ ಮೌಲ್ಯದ ಚರಾಸ್ತಿ ಹಾಗೂ ಸ್ತಿರಾಸ್ತಿ ಪತ್ತೆಯಾಗಿದೆ. ಡಿ.ವೈ.ಎಸ್ಪಿ. ರವಿಶಂಕರ್‌, ವಝೀರ್‌ ಖಾನ್‌ ಹೆಚ್ಚುವರಿ ನೋಂದಾವಣಾಧಿಕಾರಿ ಮತ್ತು ರಮೇಶ್‌ ಜಾರಕಿಹೊಳಿಯವರ ಮಾಜೀ ಆಪ್ತಕಾರ್ಯದರ್ಶಿ ಸತೀಶ್‌ ಬಿ.ಸಿ. ಮುಂತಾದವರ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು, ಗದಗ್‌, ವಿಜಯಪುರಗಳಲ್ಲಿ ಎಸಿಬಿ ದಾಳಿ ನಡೆದಿರುವ ಕುರಿತಾಗಿ ವರದಿಯಾಗಿದೆ.

Advertisement

ಹೆಚ್ಚುವರಿ ನೋಂದಾವಣಾಧಿಕಾರಿಯಾಗಿರುವ ಸತೀಶ್‌ ಬಿ.ಸಿ. ಅವರ ಬಸವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ಇಲ್ಲಿನ ವೀರಶೈವ ಕೊ ಅಪರೇಟಿವ್‌ ಬ್ಯಾಂಕ್‌ ನಲ್ಲಿ ಸತೀಶ್‌ ಅವರ ಹೆಸರಿನಲ್ಲಿದ್ದ ಮೂರು ಅಕೌಂಟ್‌ ಗಳಲ್ಲಿ 1.5 ಕೋಟಿ ರೂಪಾಯಿಗಳ ಹಣ ಪತ್ತೆಯಾಗಿದೆ. ಇದೀಗ ಎಸಿಬಿ ಅಧಿಕಾರಿಗಳು ಸತೀಶ್‌ ಅವರ ನಿವಾಸದಲ್ಲಿ ಆಸ್ತಿ ಕಡತಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇನ್ನು ಎಸಿಸಿ ಶರದ್‌ ಇಜಾರಿ ಅವರ ವಿಜಯಪುರದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆರು ಲಕ್ಷ ನಗದು, ಆರು ನಿವೇಶನ ದಾಖಲೆಗಳು ಮತ್ತು ಬ್ಯಾಂಕ್‌ ಲಾಕರ್‌ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಸಂಬಂಧಿತ ಕಡತಗಳ ಪರಿಶಿಲನೆಯನ್ನು ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ. ದಾಳಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next