Advertisement

ಮೆಹಬೂಬಾ ಮುಫ್ತಿಗೆ ಎಸಿಬಿ ನೋಟಿಸ್‌

02:26 AM Aug 05, 2019 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರ ಬ್ಯಾಂಕ್‌ನೇಮಕಾತಿ ವಿಚಾರದಲ್ಲಿ ಅವ್ಯವಹಾರದ ಆರೋಪ ಸಂಬಂಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಗೆ ಭ್ರಷ್ಟಾಚಾರ ನಿಗ್ರಹ ದಳ ನೋಟಿಸ್‌ ನೀಡಿದೆ. ಕೆಲವು ಸಚಿವರ ಶಿಫಾರಸುಗಳಿಗೆ ಅನುಗುಣವಾಗಿ ನೇಮಕಾತಿ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶಿಫಾರಸುಗಳನ್ನು ಮೌಖೀಕ ವಾಗಿ ಅಥವಾ ಇತರ ವಿಧಾನದಲ್ಲಿ ಅನುಮೋ ದಿಸಿದ್ದೀರಾ ಎಂದು ಮೆಹಬೂಬಾರನ್ನು ಪ್ರಶ್ನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ನೋಟಿಸ್‌ ನನಗೆ ಅಚ್ಚರಿ ತಂದಿಲ್ಲ ಎಂದು ಟ್ವಿಟರ್‌ನಲ್ಲಿ ಬರೆದು ಕೊಂಡಿದ್ದಾರೆ. ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ದಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next