Advertisement

ಬಿಜೆಪಿ ಜತೆ ಕೈಜೋಡಿಸಿದ ನಂತರ ಪವಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ACB ಕ್ಲೀನ್ ಚಿಟ್

04:10 PM Dec 02, 2019 | sudhir |

ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನ ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 48 ಗಂಟೆಗಳು ಕಳೆದಿವೆ. ಇದೀಗ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌ ಅವರ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಅಜಿತ್ ಪವರ್ ಮೇಲೆ ಇದ್ದ ನೀರಾವರಿ ಹಗರಣಗಳನ್ನು ಎಸಿಬಿ ಕೈ ಬಿಟ್ಟಿದ್ದು, ಅವರು ಇದರಲ್ಲಿ ಆರೋಪಿ ಅಲ್ಲ ಎಂದು ಹೇಳಿದೆ. ಮಹಾರಾಷ್ಟ್ರದಲ್ಲಿ ಭಾರೀ ಸದ್ದು ಮಾಡಿದ್ದ 70 ಸಾವಿರ ಕೋಟಿ ರೂ. ಮೌಲ್ಯದ ಹಗರಣ ಇದಾಗಿದ್ದು, ಇದರ ವಿರುದ್ಧ ಬಾರಿ ಆಕ್ರೋಶಗಳು ಕೇಳಿಬಂದಿದ್ದವು. 1999-2004ರ ನಡುವೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌-ಎನ್‌ಸಿಪಿ ಸರಕಾರದಲ್ಲಿ ಅಜಿತ್‌ ಪವಾರ್‌ ವಿರುದ್ಧ ಈ ಆರೋಪ ಕೇಳಿ ಬಂದಿತ್ತು.

ಇದೀಗ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದ್ದು, ಎನ್‌ಸಿಪಿ-ಶಿವಸೇನಾ ಮತ್ತು ಕಾಂಗ್ರೆಸ್‌ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರಕಾರ ರಚಿಸುವ ಸಿದ್ಧತೆಯಲ್ಲಿತ್ತು. ಈ ಮಧ್ಯೆ ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅಜಿತ್‌ ಪವಾರ್‌ ಅವರು ರಾತ್ರಿ ಬಿಜೆಪಿ ಜತೆ ಮಾತುಕತೆ ನಡೆಸಿ ಶನಿವಾರ ಉಪಮುಖ್ಯಮಂತ್ರಿಯಾಗಿ, ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಅವರನ್ನು ಎನ್‌ಸಿಪಿಯಿಂದ ಉಚ್ಛಾಟಿಸಲಾಗಿತ್ತು.

ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ರಚಿತವಾದ ಸರಕಾರದ ವಿರುದ್ಧ ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಅದರ ವಿಚಾರಣೆ ಪೂರ್ಣಗೊಂಡಿದ್ದು, ಮಂಗಳವಾರ ತೀರ್ಪು ಹೊರಬೀಳಲಿದೆ. ಸದ್ಯ ಎನ್‌ಸಿಪಿಯಿಂದ ಹೊರ ಹೋಗಿ ಸರಕಾರ ರಚಿಸಲು ಮುಂದಾದ ಅಜಿತ್‌ ಪವಾರ್‌ ಅವರು ಏಕಾಂಗಿಯಾಗಿದ್ದಾರೆ. ಇದೀಗ ತನ್ನ ಮೇಲಿದ್ದ ವಿವಿಧ 9 ಪ್ರಕರಣಗಳಿಂದ ಮುಕ್ತಿ ಹೊಂದಿದ್ದಾರೆ. ಇದ್ದಕ್ಕಿದ್ದಂತೆ ಅಜಿತ್‌ ಎಲ್ಲಾ ಪ್ರಕರಣಗಳನ್ನು ಕೈ ಬಿಟ್ಟಿರುವ ಎಸಿಬಿ ಕ್ರಮದ ವಿರುದ್ಧ ಟೀಕೆಗಳು ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next