ಗಂಗಾವತಿ: ವಿಧವಾ ವೇತನ ಮತ್ತು ವಂಶವೃಕ್ಷ ಪ್ರಮಾಣ ಪತ್ರಕ್ಕಾಗಿ ಕಂದಾಯ ನಿರೀಕ್ಷಕನೊಬ್ಬ ಲಂಚಕ್ಕೆ ಬೇಡಿಕೆಯಿಟ್ಟು ಲಂಚದ ಹಣವನ್ನು ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿ ಕಂದಾಯ ಅಧಿಕಾರಿಯನ್ನು ಬಂಧಿಸಿದ ಪ್ರಕರಣ ಗಂಗಾವತಿಯಲ್ಲಿ ಜರುಗಿದೆ.
ಗಂಗಾವತಿ ತಾಲೂಕಿನ ಹಂಪಸದುರ್ಗ ನಿವಾಸಿ ರೇಣುಕಮ್ಮ ಗಂಡ ಯಮನೂರಪ್ಪ ಕಾಂಗೆರಿ ಅವರ ವಿಧವಾವೇತನ ಮತ್ತು ವಂಶವೃಕ್ಷ ಮಾಡಿಕೊಡಲು ವೆಂಕಟಗಿರಿ ಪಂಚಾಯತಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.
ಈ ಮುಂಚೆ ವೆಂಕಟಗಿರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಬಸವರಾಜ ಅಂಗಡಿರವರು ಸುಮಾರು ಎರಡು ತಿಂಗಳ ಹಿಂದೆ ವೆಂಕಟಗಿರಿಯಿಂದ ನವಲಿ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡಿದ್ದು ಈಗಲೂ ವೆಂಕಟಗಿರಿಯ ಕೆಲವು ಕಡತಗಳು ವಿಷಯದಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದು ಈಗಲೂ ವೆಂಕಟಗಿರಿ ಗ್ರಾ.ಪಂ. ಗೆ ಸಂಬಂಧಿಸಿದ ಕೆಲಸದಲ್ಲಿ ಅರ್ಜಿದಾರರಿಗೆ 10 ಸಾವಿರ ರೂಪಾಯಿಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ಅದರಲ್ಲಿ ಏ.12 ರಂದು ಅರ್ಜಿದಾರರಿಂದ 800 ರೂ ಗಳ ಲಂಚದ ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದು ಬಾಕಿ ಉಳಿದ ಹಣದಲ್ಲಿ ಬುಧವಾರ 4200 ರೂ. ಕೊಡುವಂತೆ ಇನ್ನುಳಿದ ಹಣವನ್ನು ಕೆಲಸ ಆದ ಮೇಲೆ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಈಶ್ವರಪ್ಪ ಮಗ ಸಂತೋಷ್ ಗೆ ಧಮ್ಕಿ ಹಾಕಿದ್ದರು : ಲಕ್ಷ್ಮೀ ಹೆಬ್ಬಾಳ್ಕರ್ ಸ್ಫೋಟಕ ಹೇಳಿಕೆ
ಬುಧವಾರ ಅರ್ಜಿದಾರರಿಂದ 4200 ರೂ. ಲಂಚದ ಹಣವನ್ನು ಗಂಗಾವತಿಯ ಕೆಜಿಎಫ್ ಆಟೋವರ್ಕ್ಸ್ ಎಂಬ ಗ್ಯಾರೇಜ್ ದಲ್ಲಿ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿರುತ್ತಾರೆ.
ಬಳ್ಳಾರಿಯ ಎಸಿಬಿ ಎಸ್ ಪಿ ರವರ ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಡಿಎಸ್ ಪಿ ರವರ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ಕೈಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಎಸಿಬಿ ಇನ್ಸ್ ಪೆಕ್ಟರ್ ಗಳಾದ ಶಿವರಾಜ್ ಇಂಗಳೆ, ಆಂಜನೇಯ ಡಿಎಸ್. ಸಿಬ್ಬಂದಿಗಳಾದ ರಂಗನಾಥ, ಸಿದ್ದಯ್ಯ, ಜಗದೀಶ್, ಗಣೇಶ್, ಉಮೇಶ್, ಸವಿತಾ, ಆನಂದ್, ಬಸಪ್ಪ ಇದ್ದರು.