Advertisement

ಅಪಾರ ಪ್ರಮಾಣದ ಆಸ್ತಿ ಪತ್ತೆ

02:12 AM Jun 13, 2019 | Team Udayavani |

ಮಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ದಳದದ.ಕ. ಪೊಲೀಸರು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನಇಲಾಖೆಯ ಎಂಜಿನಿಯರ್‌ ಎಸ್‌. ಮಹದೇವಪ್ಪ ಅವರ ಮನೆ ಮತ್ತು ಕಚೇರಿಗಳಿಗೆ ದಾಳಿ ಮಾಡಿದ್ದಾರೆ. ಮಂಗಳೂರಿನ ಕದ್ರಿ ಕಂಬಳದ ಬಾಡಿಗೆ ಮನೆ, ಬೆಂಗಳೂರಿನ ಡ್ಯೂಪ್ಲೆಕ್ಸ್‌ ಮನೆ, ಚಿತ್ರದುರ್ಗದ 1 ಮನೆ ಮತ್ತು ಮಂಗಳೂರಿನ ಕಚೇರಿ ಸೇರಿದಂತೆ ಒಟ್ಟು 4 ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.

Advertisement

ದಾಳಿ ಸಂದರ್ಭ 5 ನಿವೇಶನ, ಚಿಕ್ಕಮಗಳೂರು, ಚಿತ್ರದುರ್ಗಗಳಲ್ಲಿ 18 ಎಕರೆ ಕೃಷಿ ಜಮೀನು, 3.11 ಲಕ್ಷ ರೂ. ನಗದು, 2150 ಯುಎಸ್‌ ಡಾಲರ್‌, 4800 ಹಾಂಕಾಂಗ್‌ ಡಾಲರ್‌, ವಿವಿಧ ಬ್ಯಾಂಕ್‌ಗಳಲ್ಲಿ 6.49 ಲಕ್ಷ ರೂ., ಎಫ್ಡಿ ಖಾತೆಯಲ್ಲಿ 12 ಲಕ್ಷ ರೂ. ಮತ್ತು ಚಿನ್ನಾಭರಣಗಳು, ಎಲ್ಐಸಿ ಪಾಲಿಸಿಗಳು ಪತ್ತೆಯಾಗಿವೆ.

ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಎಸಿಬಿ ಡಿವೈಎಸ್‌ಪಿ ಮಂಜುನಾಥ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಮೋಹಭ್‌ ಕೊಟ್ಟಾರಿ, ಜಯರಾಂ ಗೌಡ ಅವರು ಬೆಳಗ್ಗೆ 5.30 ಕ್ಕೆ ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next